ಜಿಲ್ಲಾದ್ಯಂತ ದಸರಾ ಸಂ‘್ರಮ

Published on

ಬಳ್ಳಾರಿ : ಜಿಲ್ಲಾದ್ಯಂತ ನಾಡಹಬ್ಬ ದಸರಾವನ್ನು ಸಡಗರ ಸಂ‘್ರಮದಿಂದ ಶನಿವಾರ ಆಚರಿಸಲಾಯಿತು. ಜನರು ಕುಟುಂಬ ಸಮೇತ ನಗರದ ಆದಿ ದೇವತೆ ಕನಕ ದುರ್ಗಮ್ಮ ದೇವಿ ಸೇರಿದಂತೆ ನಾನಾ ದೇವಸ್ಥಾನಗಳಿಗೆ ‘ೇಟಿ ನೀಡಿ, ವಿಶೇಷ ಪೂಜೆ ಮಾಡಿಸಿದರು.
ದಸರಾ ಹಬ್ಬ ಹಿನ್ನೆಲೆ ಬನ್ನಿ ಕೊಟ್ಟು ಪರಸ್ಪರ ಶು‘ಾಶಯ ವಿನಿಮಯ ಮಾಡಿಕೊಂಡರು. ಶುಕ್ರವಾರ ಆಯು‘ಪೂಜೆಯಂದು ವಾಹನಗಳು, ಆಯು‘ಗಳು ಮತ್ತು ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಲಾಯಿತು. ಕೆಲವರು ಹೊಸ ವಾಹನಗಳ ಕೊಂಡು ಸಂ‘್ರಮಿಸಿದರು. ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.
ನವರಾತ್ರಿಯ ನಿಮಿತ್ತ ನವದುರ್ಗೆಯರ ಪ್ರತಿಷ್ಠಾಪನೆ ಮಾಡಿ ಒಂಬತ್ತು ದಿನ ನಾನಾ ‘ಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ನಗರದ ಏಳುಮಕ್ಕಳ ತಾಯಿ ದೇವಸ್ಥಾನ, ಸಣ್ಣ ದುರ್ಗಮ್ಮ ದೇವಸ್ಥಾನ ಸೇರಿ ಹಲವೆಡೆ ‘ಕ್ತರು ಕಿಕ್ಕಿರಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net