

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸರ್ಕಾರಿ ಕಚೇರಿ ಒಳಗೊಂಡು ವಿವಿಧ ಪಕ್ಷಗಳ ಕಚೇರಿಗಳಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿಯ ಆರಾಧನೆ, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಗಾಗಿ ದುಡಿದ ಮಹನೀಯರನ್ನು ಸ್ಮರಿಸುವ ಮೂಲಕ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಪ್ರಧಾನ ಅಂಚೆ ಕಚೇರಿ: ಪ್ರಧಾನ ಅಂಚೆ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಅಂಚೆ ಅಧೀಕ್ಷಕಿ ಉಷಾ, ಅಂಚೆ ಪಾಲಕ ದೇವರಾಜ, ಕರಿಸಿದ್ಧಪ್ಪ, ನಿಜಲಿಂಗಪ್ಪ, ಮಂಜುನಾಥ, ಮಧುಸೂದನ್, ಶ್ರೀನಿವಾಸ, ಲಿಂಗೇಶ, ಯಲ್ಲಮ್ಮ, ಶಶಿಕಲಾ, ಸುಧಾ, ನಿಂಗಮ್ಮ, ಸಂತೋಷ, ಶಶಿಕಾಂತ್, ಜೈಮಾರುತಿ, ಬೀರಪ್ಪ ಜವಳೇರ್, ಅರುಣ್, ವರ್ಷಾ ಇತರರಿದ್ದರು.
ಕನ್ನಡಿಗರ ಬಳಗ: ಇಲ್ಲಿನ ದೊಡ್ಡಪೇಟೆಯ ಕನ್ನಡಿಗರ ಬಳಗದಿಂದ ರಾಜ್ಯೋತ್ಸವ ಆಚರಿಸಲಾಯಿತು. ಬಳಗದ ಅಧ್ಯಕ್ಷ ಡಿ.ಆರ್.ಹಿಮಾಂತೇಶ, ಆನಂದ್, ಜಯಣ್ಣ, ಉದಯ್, ಸದಾಶಿವ, ಸುನೀಲ್, ನಾಗರಾಜ್ ಇತರರಿದ್ದರು.
ಕಾಂಗ್ರೆಸ್: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಪದಾಧಿಕಾರಿಗಳಾದ ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಶಿವಣ್ಣ ಇತರರಿದ್ದರು.
ಪಾರ್ಶ್ವನಾಥ ವಿದ್ಯಾಸಂಸ್ಥೆ: ಪಾರ್ಶ್ವನಾಥ ವಿದ್ಯಾಸಂಸ್ಥೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಾಬೂಲಾಲ್, ಉಪಾಧ್ಯಕ್ಷ ಉತ್ತಮಚಂದ್, ಕಾರ್ಯದರ್ಶಿ ಸುರೇಶ್‌ಕುಮಾರ್, ಚಿತ್ರಕಲಾವಿದ ನಾಗರಾಜ್ ಬೇದ್ರೇ, ಮುಖ್ಯ ಶಿಕ್ಷಕಿ ನಾಜೀಮ್, ಶಿಕ್ಷಕಿಯರಾದ ವಿಜಯಲಕ್ಷ್ಮೀ, ಶಾಂತಾ ಇತರರಿದ್ದರು.
ಪಾಲಿಟೆಕ್ನಿಕ್ ಕಾಲೇಜು: ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ನಗರದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಉಪನ್ಯಾಸಕರಾದ ಗಂಗಾಧರ್, ಕೆ.ಸುರೇಶ್, ಗ್ರಂಥಪಾಲಕ ಎಂ.ವೀರಯ್ಯ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಪಿ.ಎ.ರಘು, ಸೋಮಶೇಖರ್ ಮಾಷ್ಯಾಳ್, ಅಧೀಕ್ಷಕ ಸಿ.ಎನ್.ಮೋಹನ್, ಸಿಬ್ಬಂದಿ ಎಂ.ಜೆ.ರುದ್ರಮೂರ್ತಿ, ನಿರಂಜನ, ವಿನಯ್ ಇತರರಿದ್ದರು.
ಭಾರತೀಯ ಯೋಗ ಶಿಕ್ಷಣ ಸಂಸ್ಥೆ: ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ರಾಜ್ಯೋತ್ಸವ ಆಚರಿಸಲಾಯಿತು. ಉಪನ್ಯಾಸಕ ಡಾ.ಎಸ್.ಎಚ್.ಶಫಿವುಲ್ಲಾ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ರಶ್ಮಿ ಅಕ್ಕ, ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್, ಗೌರವಾಧ್ಯಕ್ಷ ಆರ್.ಸತ್ಯಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನಚಾರ್, ಯೋಗ ಸಾಧಕರಾದ ವನಜಾಕ್ಷಮ್ಮ, ಅಂಬುಜಮ್ಮ, ಅನಿತಾ, ಸುಧಮ್ಮ, ರೀನಾ ವೀರಭದ್ರಪ್ಪ, ಬೆಳಗಟ್ಟ ಪಿಎಚ್‌ಸಿ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಡಿ.ಮಹೇಶ್, ಯೋಗ ಶಿಕ್ಷಕ ಎಂ.ಆರ್.ಮಂಜುನಾಥ್, ವಸಂತಲಕ್ಷ್ಮೀ, ಮಂಜುಳಾ ಇತರರಿದ್ದರು.
ಡಯಟ್: ನಗರದ ಡಯಟ್‌ನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್, ಉಪ ಪ್ರಾಚಾರ್ಯ ಅಶ್ವಥ್ ನಾರಾಯಣ, ಉಪನ್ಯಾಸಕರಾದ ಎಸ್.ಜ್ಞಾನೇಶ್ವರ, ಎಸ್.ಸಿ.ಪ್ರಸಾದ್, ಗಿರಿಜಾ, ತಿಪ್ಪೇಸ್ವಾಮಿ, ಆರ್.ನಾಗರಾಜು, ಎಸ್.ಬಸವರಾಜು, ಯು.ಸಿದ್ದೇಶಿ, ನಿತ್ಯಾನಂದ, ಕನಕಮ್ಮ, ಲೀಲಾವತಿ, ಅರ್ಜುಮಂದ್ ಬಾನು, ಪದ್ಮಾ, ಶಿವಲೀಲಾ, ರೇವಣ್ಣ, ತಾಂತ್ರಿಕ ಸಹಾಯಕ ಅವಿನಾಶ್, ಕಚೇರಿ ಅಧೀಕ್ಷಕ ದೇವೇಂದ್ರಪ್ಪ, ಸಹಾಯಕ ಸಾಂಖ್ಯಿಕ ಅಧಿಕಾರಿ ರೂಪಾ, ನಿರ್ವಾಹಕರಾದ ಮಂಜುನಾಥ್, ಶಿವಣ್ಣ, ಕ್ಷೀರಾ, ಚಂದ್ರಶೇಖರ್, ವಿನಯ್, ನಿರ್ಮಲಾ, ಬೋಸಯ್ಯ, ಯುವರಾಜ್ ಇತರರಿದ್ದರು.
ಮೆದೇಹಳ್ಳಿ ಗ್ರಾಪಂ: ಮೆದೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಗ್ರಾಪಂ ಸದಸ್ಯ ಟಿ.ಚಂದ್ರಶೇಖರ್, ಮುಖಂಡ ಎಂ.ಸಿ.ಶಂಕರ್, ಮುಖ್ಯ ಶಿಕ್ಷಕ ಅಜ್ಜಪ್ಪ, ಶಿಕ್ಷಕರಾದ ಅನಿತಾ, ನವೀನ್, ಸಿದ್ದೇಶ್, ಶ್ವೇತಾ, ಗಿರೀಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಇತರರಿದ್ದರು.