ಜಿಲ್ಲಾದ್ಯಂತ 16 ಸಾವಿರ ಶೌಚಗೃಹ ನಿರ್ಮಾಣ

CTD CEO ANDOALANA...
Published on

ಚಿತ್ರದುರ್ಗ: ಜಿಲ್ಲಾದ್ಯಂತ ನ.19 ರಿಂದ ಡಿ.20 ರವರೆಗೆ ನಮ್ಮ ಶೌಚಗೃಹ ನಮ್ಮ ಗೌರವ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.

ಜಿಪಂ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸುರಕ್ಷಿತ ನೈರ್ಮಲ್ಯ ಹಾಗೂ ಬಹಿರ್ದೆಸೆಮುಕ್ತ ವಾತಾವರಣ ನಿರ್ಮಾಣ, ನಿರಂತರವಾಗಿ ಶೌಚಗೃ ಹಗಳನ್ನು ಬಳಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಅಂದದ ಶೌಚಗೃಹ-ಆನಂದದ ಜೀವನ ಎಂಬ ಘೋಷ ವಾಕ್ಯದೊಂದಿಗೆ ಆಂದೋಲನ ನಡೆಸಲಾಗುತ್ತಿದೆ.

ಬಳಕೆಯಲ್ಲಿ ಇರದ ಸಮುದಾಯ ಶೌಚಗೃಹಗಳನ್ನು ಗುರುತಿಸಿ, ದುರಸ್ತಿಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಲಾಗುವುದು. ಶೌಚ ಗೃಹಗಳ ಕೊರತೆ ಇರುವ ಶಾಲೆ, ಸರ್ಕಾರಿ ಕಚೇರಿಗಳಲ್ಲಿ ಹೊಸದಾಗಿ ಶೌಚಗೃಹ ನಿರ್ಮಿಸಲಾಗುವುದು. ಪೌರ ಕಾರ್ಮಿಕರಿಗೆ ಆ ರೋಗ್ಯ ಶಿಬಿರ ಆಯೋಜಿಸಿ, ಸುರಕ್ಷಾ ಪರಿಕರಗಳನ್ನು ವಿತರಿಸಲಾಗುವುದು ಎಂದರು.

ಈಗಾಗಲೇ ಜಿಲ್ಲೆಯನ್ನು ಬಯಲು ಶೌಚಮುಕ್ತ ಪ್ರದೇಶವೆಂದು ಘೋಷಿಸಲಾಗಿದೆ. ಪ್ರಸಕ್ತ ವರ್ಷ 16 ಸಾವಿರ ಶೌಚಗೃಹ ನಿರ್ಮಾಣ ಗುರಿ ಇದೆ. ಶೌಚಗೃಹ ಕಟ್ಟಿಸಿಕೊಳ್ಳಲು ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಪಂ, ತಾಪಂ ಹಾಗೂ ಗ್ರಾಪಂ ಕಚೇರಿ ಗಳಿಗೆ ನೇರವಾಗಿ ಭೇಟಿ ನೀಡಬಹುದು. ಆಯ್ಕೆಯಾದ ಎಸ್‌ಸಿ ಹಾಗೂ ಎಸ್‌ಟಿ ಫಲಾನುಭವಿಗಳಿಗೆ 20 ಸಾವಿರ ರೂ., ಇತರೆ ಫಲಾನುಭವಿಗಳಿಗೆ 12 ಸಾವಿರ ರೂ.ಸಹಾಯಧನ ನೀಡುವುದಾಗಿ ಸಿಇಒ ಮಾಹಿತಿ ನೀಡಿದರು.

ಜಿಪಂ ಆವರಣದಲ್ಲಿ ನಿರ್ಮಿಸಿರುವ ಮಹಿಳೆಯರ ಶೌಚಗೃಹವನ್ನು ಉದ್ಘಾಟಿಸಲಾಯಿತು. ಡಿಎಸ್‌ಹಳ್ಳಿ ಗ್ರಾಪಂ ವ್ಯಾಪ್ತಿಯ ಮೂವ ರು ಫಲಾನುಭವಿಗಳಿಗೆ ಶೌಚಗೃಹ ನಿರ್ಮಾಣದ ಕಾರ್ಯಾದೇಶ ವಿತರಿಸಲಾಯಿತು.

ಜಿಪಂ ಮುಖ್ಯಯೋಜನಾಧಿಕಾರಿ ಗಾಯತ್ರಿ, ಹೈಜೆನಿಕ್ ಕನ್ಸಲ್ಟೆಂಟ್ ಪ್ರಮೀಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಡಿಎಚ್‌ಒ ಡಾ.ರೇಣುಪ್ರಸಾದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸನಗೌಡ ಮೇಟಿ ಪಾಟೀಲ್, ಡಿಎಸ್‌ಹಳ್ಳಿ ಗ್ರಾಪಂ ಪಿಡಿಒ ಶಿಲ್ಪಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net