ಜಿಲ್ಲಾಡಳಿತದೊಂದಿಗೆ ಎಸ್‌ಪಿಜಿ ಅಧಿಕಾರಿಗಳ ಸಭೆ

Published on

ಚಿತ್ರದುರ್ಗ: ನಗರದ ಸೈನ್ಸ್ ಕಾಲೇಜು ಮೈದಾನದಲ್ಲಿ ಮೇ 2ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ‌್ಯಾಲಿಯ ಹಿನ್ನೆಲೆಯಲ್ಲಿ ಎಸ್‌ಪಿಜಿ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಭೆ ಶನಿವಾರ ಡಿಸಿ ಕಚೇರಿಯಲ್ಲಿ ನಡೆಯಿ ತು.

ಪ್ರಧಾನಿ ಅವರ ಸುರಕ್ಷತೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ ಎಸ್‌ಪಿಜಿ ಅಧಿಕಾರಿಗಳು,ಪೊಲೀಸ್,ಆರೋಗ್ಯ, ಲೋಕೋಪ ಯೋಗಿ,ಅಗ್ನಿಶಾಮಕ,ಬೆಸ್ಕಾಂ,ನಗರಸಭೆ ಅಧಿಕಾರಿಗಳೊಂದಿಗೆ ಹಲವು ಸಲಹೆ,ಸೂಚನೆಗಳನ್ನು ನೀಡಿದರು. ಪ್ರಧಾನಿ ಅವರ ಭದ್ರತೆಗೆ ಕಟ್ಟೆ ಚ್ಚರ ವಹಿಸಬೇಕು.

ಇದಕ್ಕೆ ಅಗತ್ಯವಿರುವ ಕ್ರಮಗಳಲ್ಲಿ ಎಲ್ಲೂ ಲೋಪವಾಗದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮಗಳನ್ನು ತೆಗೆದು ಕೊಳ್ಳ ಬೇಕೆಂದು ತಿಳಿಸಿದ್ದಾರೆ. ಪ್ರಧಾನಿ ಅಂದು ಬೆಳಗ್ಗೆ ಚಳ್ಳಕೆರೆ ಡಿಸಿಆರ್‌ಡಿಒ ಎಟಿಆರ್‌ಗೆ ವಿಶೇಷ ವಿಮಾನದಲ್ಲಿ ಬಂದಿಳಿ ಯಲಿದ್ದು,ಅಲ್ಲಿಂದ ನಗರದ ವೀ ರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಹೆಲಿಕಾಫ್ಟರ್‌ನಲ್ಲಿ ಆಗಮಿಸಲಿದ್ದಾರೆ. ಯಾವುದೇ ರೋಡ್ ಇರುವುದಿಲ್ಲ. ಸಮಾವೇಶದ ನಂತರ ಪ್ರಧಾನಿ ಅವರು ಹೊಸಪೇಟೆಗೆ ತೆರಳುತ್ತಾರೆಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಹಾಗೂ ಎಸ್‌ಪಿ ಕೆ.ಪರಶುರಾಮ ತಿಳಿಸಿದ್ದಾರೆ. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net