ಜಿಲ್ಲಾಡಳಿತಕ್ಕೆ ಸಹಕಾರ ನೀಡಿ

8 5 SBD 3
Published on

ಶಹಾಬಾದ್: ನಗರದಲ್ಲಿ ಮೂವರಲ್ಲಿ ಕರೊನಾ ಕಾಣಿಸಿಕೊಂಡಿತ್ತು, ಇದೀಗ ಅವರೆಲ್ಲರೂ ಗುಣಮುಖರಾಗಿ ವಾಪಸಾಗಿದ್ದಾರೆ. ಆದರೂ ಜಿಲ್ಲಾದ್ಯಂತ ಲಾಕ್ಡೌನ್ ಜಾರಿ ಮಾಡಿರುವುದರಿಂದ ವರ್ತಕರು ಸಹಕಾರ ನೀಡಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ ಮನವಿ ಮಾಡಿದರು.
ಪಟ್ಟಣದಲ್ಲಿ ಸಂತೋಷ ಟ್ರೇಡರ್ಸ್ನಲ್ಲಿ ಶುಕ್ರವಾರ ಬೆಳಗ್ಗೆ ಕಿರಾಣಿ, ಜವಳಿ, ಸ್ವೀಟ್, ಬೇಕರಿ ಅಂಗಡಿ ಸೇರಿ ವಿವಿಧ ವರ್ತಕರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಷರತ್ತುಗಳೊಂದಿಗೆ ತಾಲೂಕು ಆಡಳಿತ ಪಟ್ಟಣದಲ್ಲಿ ಕೆಲವು ಅಂಗಡಿಗಳನ್ನು ತರೆಯಲು ಅನುಮತಿ ನೀಡಿತ್ತು. ಆದರೆ ಜಿಲ್ಲಾದ್ಯಂತ ಜನತೆ ನಿಯಮಗಳನ್ನು ಪಾಲಿಸದಿರುವುದರಿಂದ ಡಿಸಿ ಅವರು ಆದೇಶವನ್ನು ವಾಪಾಸ್ ಪಡೆದಿದ್ದಾರೆ. ಹೀಗಾಗಿ ಎಲ್ಲರೂ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ತಹಸೀಲ್ದಾರ್ ಸುರೇಶ ವರ್ಮಾ , ಪಿಐ ಬಿ.ಅಮರೇಶ, ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ಅರುಣ ಪಟ್ಟಣಕರ್, ಮೃತ್ಯುಂಜಯ ಸ್ವಾಮಿ ಹಿರೇಮಠ, ವಿಜಯಕುಮಾರ ಓಝಾ, ಮಲ್ಲಿಕಾಜರ್ುನ ತುಪ್ಪದ, ಮಹಾವೀರ ಸುಗಂಧಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net