

ಬೀದರ್: ನಗರ ಹೊರವಲಯದ ರಿಂಗ್ ರೋಡ್ ಸುಂದರೀಕರಣಕ್ಕೆ ಜಿಲ್ಲಾಡಳಿತ ನಡೆಸುತ್ತಿರುವ ಅಭಿಯಾನಕ್ಕೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಸಾಥ್ ನೀಡಿದೆ.
ದೇವ ದೇವ ವನದಿಂದ ಚಿಕ್ಪೇಟ್ಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ವಿಭಜಕದಲ್ಲಿನ ಮುಳ್ಳು-ಕಂಟಿ, ಕಳೆ ತೆರವಿಗೆ ಭಾನುವಾರ ಬೆಳಗ್ಗೆ ನಡೆದ ಶ್ರಮದಾನದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನೇತೃತ್ವದಲ್ಲಿ ಪದಾಧಿಕಾರಿಗಳು, ನೌಕರರು ಪಾಲ್ಗೊಂಡರು.
ನಗರವನ್ನು ಸ್ವಚ್ಛ, ಹಸಿರು ಹಾಗೂ ಸುಂದರವನ್ನಾಗಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಯೋಜನೆ ಹಾಕಿಕೊಂಡಿದ್ದಾರೆ. 19 ಕಿಮೀ ರಿಂಗ್ ರೋಡ್ ನಡುವೆ ಅಲಂಕಾರಿಕ ಸಸಿಗಳನ್ನು ನೆಟ್ಟು ಸುಂದರೀಕರಣಗೊಳಿಸುವ ಯೋಜನೆ ಕೈಗೆತ್ತಿಕೊಂಡಿದ್ದು ಸ್ವಾಗತಾರ್ಹ. ಈ ಅಭಿಯಾನಕ್ಕೆ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದು ರಾಜೇಂದ್ರಕುಮಾರ ಕೋರಿದರು.
ಸಂಘದ ಪ್ರಮುಖರಾದ ರಾಜಶೇಖರ ಮಂಗಲಗಿ, ಅಶೋಕರಡ್ಡಿ, ಬಸವರಾಜ ಜಕ್ಕಾ, ರಾಜಕುಮಾರ ಹೊಸದೊಡ್ಡೆ, ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ, ಬಕ್ಕಪ್ಪ, ಮನೋಹರ ಕಾಶಿ, ಸಂಜು ಸೂರ್ಯವಂಶಿ, ಗಣಪತಿ, ನೀಲಕಂಠ ಬಿರಾದಾರ, ವೆಂಕಟ ಸಿಂಧೆ, ಅನ್ವರ್ ಬೇಗ್, ಸುನಿಲ್, ಉಮೇಶ ಪಾಟೀಲ್, ಶಾಂತಕುಮಾರ ಬಿರಾದಾರ, ಬಳವಂತರಾವ ರಾಠೋಡ್, ಸೂರ್ಯಕಾಂತ ಸಾಳೆ, ಶಾಮರಾವ ಮೋರ್ಗಿಕರ್, ರಾಜಶೇಖರ ಮಠ ಇತರರಿದ್ದರು.