

ಬೀದರ್: ಜಿಲ್ಲಾ ಬಿಜೆಪಿ ರೈತ ಸಮಾವೇಶ ಇಲ್ಲಿನ ಬೆಲ್ದಾಳೆ ಸಭಾ ಮಂಟಪದಲ್ಲಿ ಜರುಗಿತು. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕುಶಾಲ ಪಾಟೀಲ್ ಗಾದಗಿ ಉದ್ಘಾಟಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ್, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಾಲಾದೆ ಮಾತನಾಡಿದರು. ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಅಧ್ಯಕ್ಷತೆ ವಹಿಸಿದ್ದರು. ಮೋರ್ಚಾ ಜಿಲ್ಲಾಧ್ಯಕ್ಷ ಶಾಂತವೀರ ಕೇಸ್ಕರ್, ಬಿಡಿಎ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಸಂಜುಕುಮಾರ ಪಾಟೀಲ್ ಜ್ಯಾಂತಿ, ಸುರೇಶ ಬಿರಾದಾರ್, ರಾಜಕುಮಾರ ಹರಕಂಚಿ, ಚನ್ನಬಸವ ಬಿರಾದಾರ್, ಬಸವರಾಜ ಅಷ್ಟಗಿ, ಚನ್ನಬಸವ ಕೌಠಾ ಇತರರಿದ್ದರು.