

ಬೆಳಗಾವಿ: ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ಪ.ಪೂ. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪದವಿ ಪೂರ್ವ ಶಿಕ್ಷಣ ಇಲಾಖೆಯ, ಬೆಳಗಾವಿ ಜಿಲ್ಲಾ ಮಟ್ಟದ 2023-24 ರ ಸ್ಪರ್ದೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕುಮಾರಿ.ಇಮಾನಿ ಜಾಧವ ಇವಳು ಈಜು ಸ್ಪರ್ದೆಯಲ್ಲಿ ಭಾಗವಹಿಸಿ 100 ಮೀಟರ್ 200 ಮೀಟರ್ ಬ್ಯಾಕ್ ಸ್ಟೋಕ್ ಮತ್ತು 200 ಮೀಟರ್ ಬಟ್ಟರ್‌ಪ್ಲಾಯ್ ಸ್ಟ್ರೋಕನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ರಾಜ್ಯ ಮಟ್ಟದ ಸ್ಪರ್ಧೆೆಗೆ ಆಯ್ಕೆ ಆಗಿದ್ದಾಳೆ. ಅದೇ ರೀತಿ ಇನ್ನೊರ್ವ ವಿದ್ಯಾರ್ಥಿನಿ ಕುಮಾರಿ ಯಾನವಿ ಪೋರವಾಲ ಇವಳು ಜಿಲ್ಲಾ ಮಟ್ಟದ ಬಾಕ್ಸಿಂಗ್ ಸ್ಪರ್ಧೆೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆ ಆಗಿದ್ದಾಳೆ. ಈ ವಿದ್ಯಾರ್ಥಿ ಸಾಧನೆಗೆ ಪ್ರಾಂಶುಪಾಲ ಡಾ. ಸಿ.ಎನ್.ನಾಯ್ಕರ ಹಾಗೂ ನಾಯ್ಕರ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಶ್ವೇತಾ ಸಿ.ನಾಯ್ಕರ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.