ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಾಸವಿ ಶಾಲೆ ಸಾಧನೆ

14kglphoto2..
ಕೊಳ್ಳೇಗಾಲ ಪಟ್ಟಣದ ಶ್ರೀ ವಾಸವಿ ವಿದ್ಯಾಕೇಂದ್ರ ಶಾಲೆಯ 6 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡ ಹಿನ್ನೆಲೆ ಶಾಲಾ ಆಡಳಿತ ಅಭಿನಂದಿಸಿತು.
Published on

ಕೊಳ್ಳೇಗಾಲ: ಚಾಮರಾಜನಗರದ ಡಾ.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಟ್ಟಣದ ಶ್ರೀ ವಾಸವಿ ವಿದ್ಯಾಕೇಂದ್ರ ಶಾಲೆಯ 6 ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲೆಯ 10ನೇ ತರಗತಿ ವಿದ್ಯಾರ್ಥಿ ಫರ್ಹಾನ್ ಖಾನ್ 200 ಮೀ.(ಪ್ರ), 100 ಮೀ.(ದ್ವಿ), ಉದ್ದ ಜಿಗಿತ (ಪ್ರ) ಸ್ಥಾನ ಪಡೆದಿದ್ದು, ವೈಯಕ್ತಿಕ ಹಾಗೂ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಉಲ್ಲಾಸ್ ತ್ರಿವಿಧ ಜಿಗಿತದಲ್ಲಿ (ತೃ), ಬಾಲಕರ 4100 ಮೀ. ಓಟದಲ್ಲಿ ಫರ್ಹಾನ್ ಖಾನ್, ಉಲ್ಲಾಸ್, ಮಧುರ್, ಮಹಾರಾಜ್, ಚಿರಂಜಿವಿ ಸೂರ್ಯ (ದ್ವಿ), ಬಾಲಕಿಯರ 4100 ಮೀಟರ್ ಓಟದಲ್ಲಿ ಸಂಜನಾ, ಐಶ್ವರ್ಯ, ಅನನ್ಯಾ, ಹೇಮಾ (ಪ್ರ), ಉದ್ದ ಜಿಗಿತದಲ್ಲಿ ಸಂಜನಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿ ಮೊಹಮದ್ ರೇಹಾನ್ 100 ಮೀ. ದ್ವಿತೀಯ, 4*100 ಮೀ ಓಟದಲ್ಲಿ ಮೊಹಮದ್ ರೇಹಾನ್, ಮೋಹಿತ್ ಕಲಮಲ್ಲ, ದೀಪಕ್‌ಗೌಡ, ಯಶ್ವಂತ್ ನಾಯಕ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕ್ರೀಡಾಪಟುಗಳನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎ.ಡಿ. ಕುಮಾರಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್, ಮುಖ್ಯೋಪಾಧ್ಯೇಯಿನಿ ಬಿ.ಎಸ್.ಗೀತಾ, ದೈಹಿಕ ಶಿಕ್ಷಣ ಶಿಕ್ಷಕರಾದ ಸಿ.ನಾಗೇಂದ್ರ, ಎಲಿಜಬೆತ್ ಶೀಬಾ, ಆರ್.ಸುನೀಲ್, ಎಂ.ಸುನೀಲ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net