ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

web
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರ ದಿನಾಚರಣೆ ನಿಮಿತ್ತ ನೀಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಶಾಲಾ ಶಿಕ್ಷಣ ಇಲಾಖೆ ಸೋಮವಾರ ಪ್ರಕಟಿಸಿದೆ. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಧಾರವಾಡದ ಎಲ್‌ಪಿಎಸ್ ಹರಿಜನಕೇರಿಯ ವಿಜಯಾ ಲಾಡ್, ಧೂಪಾರ್ತಿವಾಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿವಾನಂದ ಕೆಲಗೇರಿ, ಹುಬ್ಬಳ್ಳಿ ಹನುಮಂತನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಸರೋಜಾ ಪಾಟೀಲ, ನವಲಗುಂದ ತಾಲೂಕು ಅಣ್ಣಿಗೇರಿಯ ಎಲ್‌ಪಿಎಸ್ ನಂ.8ರ ವಿ.ಎಫ್. ಮಡಿವಾಳರ, ಕಲಘಟಗಿ ತಾಲೂಕು ಕಲಕುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಸಪ್ಪ ಹೊಸಮನಿ, ಹುಬ್ಬಳ್ಳಿ ವರೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾರಾಯಣ ಆರೇರ, ಕುಂದಗೋಳ ಬೆಳ್ಳಿಗಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೋಭಾ ಬಡಿಗೇರ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಧಾರವಾಡ ನವಲೂರ ಛಾವಣಿ ಎಚ್‌ಪಿಎಸ್‌ನ ಸಂತೋಷ ಕರಮಳ್ಳವರ, ಹುಬ್ಬಳ್ಳಿ ಬಿಡನಾಳ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಎಸ್.ಎಸ್. ಕುಲಕರ್ಣಿ, ಹುಬ್ಬಳ್ಳಿ ಶರೇವಾಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೋಭಾ ಕೊಂಗನವರ, ಕಲಘಟಗಿ ಲಿಂಗನಕೊಪ್ಪ ಎಚ್‌ಪಿಎಸ್‌ನ ಕೆ.ಡಿ. ಹವಳಿ, ಕುಂದಗೋಳ ಹಿರೇನರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಹಾದೇವಪ್ಪ ಬೆಳಗಲಿ, ನವಲಗುಂದ ಆರೇಕುರಹಟ್ಟಿ ಎಚ್‌ಪಿಎಸ್‌ನ ವೆಂಕರಡ್ಡಿ ವಾಸನದ, ಧಾರವಾಡದ ತಡಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೋಭಾ ಶಿರಯಣ್ಣವರ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗದಲ್ಲಿ ಧಾರವಾಡ ಯರಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ಪ್ರವೀಣಾ ಎಸ್., ನವಲೂರ ಪ್ರೌಢ ಶಾಲೆಯ ಸುಜಾತಾ ಗಿರಾಗತಿ, ಹುಬ್ಬಳ್ಳಿ ಆನಂದನಗರ ಪ್ರೌಢ ಶಾಲೆಯ ಶಾಂತಾ ಉಮತಾರ, ಹುಬ್ಬಳ್ಳಿ ಕುರಡಿಕೇರಿ ಪ್ರೌಢ ಶಾಲೆಯ ರಾಜೇಶ್ರೀ ಬಿಡಿ, ಕಲಘಟಗಿ ಬಗಡಗೇರಿ ಸರ್ಕಾರಿ ಪ್ರೌಢ ಶಾಲೆಯ ಅಶೋಕ ಶಿರಗುಪ್ಪಿ, ಕುಂದಗೋಳ ಕುಂಕೂರ ಪ್ರಾಥಮಿಕ ಶಾಲೆಯ ಜಗದೀಶ ಸವಲಣ್ಣವರ ಹಾಗೂ ನವಲಗುಂದ ಅಣ್ಣಿಗೇರಿಯ ಬಿ.ಎಂ. ಮುಜಾವರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net