

ಯಾದಗಿರಿ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಕಟಿಸಲಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿದರ್ೇಶಕ ಮಂಜುನಾಥ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಶಹಾಪುರ ತಾಲೂಕಿನ ಬೆನಕನಳ್ಳಿ (ಜೆ) ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಈಶ್ವರ, ಸುರಪುರ ತಾಲೂಕಿನ ವಜ್ಜಲ್ ಗ್ರಾಮದ ಶಾಲೆ ಷಣ್ಮುಖಪ್ಪ ನುಚ್ಚಿ, ರೇವುನಾಯಕ ತಾಂಡದ ಶಾಲೆ ಮಲ್ಲಪ್ಪ ತಂದೆ ಗ್ಯಾನಪ್ಪ, ಯಾದಗಿರಿ ನಗರದ ಲಾಡಿಸ್ಗಲ್ಲಿ ಶಾಲೆ ಗುಲಾಮ ಹಫೀಜ್ ಪಟೇಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ವಡಗೇರಾ ಪಟ್ಟಣದ ಉದರ್ು ಶಾಲೆ ಶಿಕ್ಷಕಿ ಮೀನಾಕ್ಷಿ, ಸುರಪುರ ತಾಲೂಕಿನ ಕಡದರಾಳ ಗ್ರಾಮದ ಶಾಲೆ ಭೀಮನಗೌಡ, ಸೈದಾಪೂರ ಸ್ಟೇಷನ್ ಶಾಲೆ ರತ್ನಕ್ಕ ಆಯ್ಕೆಯಾಗಿದವರು.
ಪ್ರೌಢ ಶಾಲಾ ವಿಭಾಗ: ಶಹಾಪೂರ ತಾಲೂಕಿನ ದರ್ಶನಾಪೂರ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಸೂಡಿ, ಸುರಪುರ ತಾಲೂಕಿನ ಬೆನಕನಳ್ಳಿ ಶಾಲೆ ಸಾಹೇಬಗೌಡ ಯ.ಬಿರಾದಾರ, ಯಾದಗಿರಿ ತಾಲೂಕಿನ ಅರಕೇರಾ (ಕೆ)ಶಾಲೆ ಶಿಕ್ಷಕ ಚಾಂದಸಾಬ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾಗಿದ್ದಾರೆ ಎಂದು ಅವರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.