

ಕಡೂರು: ಗಿರಿಯಾಪುರ ಗ್ರಾಮದ ಜ್ಞಾನ ದೀಪ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಿಸಲೆರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಎಸ್.ಎಸ್.ಕಾವ್ಯಾ ಉದ್ದ ಜಿಗಿತ, ಗುಂಡು ಎಸೆತ(ಪ್ರ), ಚಕ್ರ ಎಸೆತದಲ್ಲಿ (ತೃ)ಸ್ಥಾನ, ಬಾಲಕರ ವಿಭಾಗದ ಎತ್ತರ ಜಿಗಿತದಲ್ಲಿ ತರುಣ್‌ರಾಜ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ಮಕ್ಕಳ ಸಾಧನೆಗೆ ಎಸ್‌ಡಿಎಂಸಿ ಪ್ರೋತ್ಸಾಹ ಹೆಚ್ಚಿನದಾಗಿದೆ ಎಂದು ದೈಹಿಕ ಶಿಕ್ಷಕಿ ಬಿ.ಎಸ್.ಲತಾಮಣಿ ತಿಳಿಸಿದ್ದಾರೆ.