ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನಾಗಾಪುರ ಗಿರಿಜನ ಆಶ್ರಮ ಶಾಲೆ ಮಕ್ಕಳು

sports
ಹುಣಸೂರು ತಾಲೂಕು ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ನಾಗಪುರ ಗಿರಿಜನ ಆಶ್ರಮ ಶಾಲೆಯ ಆದಿವಾಸಿ ಮಕ್ಕಳು.
Published on

ಹನಗೋಡು: ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೋಬಳಿಯ ಗಿರಿಜನ ಆಶ್ರಮ ಶಾಲೆಯ ಆದಿವಾಸಿ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಹೋಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಹುಣಸೂರಿನ ಪ್ರತಿಷ್ಠಿತ ಸಂತ ಜೋಸೆಫರ ಶಾಲಾ ತಂಡವನ್ನು 2-0 ನೇರ ಸೆಟ್‌ಗಳಿಂದ ಜಯ ಗಳಿಸಿದ್ದಾರೆ. ಇದಕ್ಕೂ ಮೊದಲು ಬಿಳಿಕೆರೆ ತಂಡವನ್ನು 2-0 ನೇರಸೆಟ್ ಮೂಲಕ ಸೋಲಿಸಿದರು. ತಂಡದ ನಾಯಕ ಚೇತನ್, ಅಭಿಜಿತ್ ಸೇರಿದಂತೆ ಎಲ್ಲರೂ ಅದ್ಭುತ ಆಟ ಪ್ರದರ್ಶಿಸಿದರು.
ಮಕ್ಕಳ ಸಾಧನೆಗೆ ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಬಿಇಒ ರೇವಣ್ಣ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜು, ಮುಖ್ಯ ಶಿಕ್ಷಕ ಲಕ್ಷ್ಮಣ್ ಸೇರಿದಂತೆ ಶಿಕ್ಷಕ ವೃಂದ ಅಭಿನಂದಿಸಿದೆ.

ಗಿರಿಜನ ಆಶ್ರಮ ಶಾಲೆಯ ಕ್ರೀಡಾಪಟುಗಳು ಇಷ್ಟು ದೊಡ್ಡ ಸಾಧನೆ ಮಾಡಿರುವ ಈ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಪಕ್ಕದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅನ್ಸರ್ ಪಾಷ ಹಾಗೂ ಆಶ್ರಮ ಶಾಲೆಯ ಸಹಶಿಕ್ಷಕ ಜಲೇಂದ್ರ ತರಬೇತಿ ನೀಡಿದ್ದು, ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net