

ಯಾದಗಿರಿ: ಕಾಂಗ್ರೆಸ್ ಸರಕಾರದ ಅನ್ನದಾತರ ವಿರೋ ನೀತಿಯನ್ನು ಖಂಡಿಸಿ ಸೋಮವಾರ ಇಲ್ಲಿನ ಸುಭಾಶ್ಚಂದ್ರ ಬೋಸ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿ, ರಾಜ್ಯದಲ್ಲಿ ಸರಕಾರ ಬಂದು ಮೂರು ತಿಂಗಳು ಕಳೆದರೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಚಿಂತಿಸುತ್ತಿಲ್ಲ. ಏತನ್ಮಧ್ಯೆ ರಾಜ್ಯದ್ಯಂತ 40ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ನಲ್ಲಿ ಅನ್ನದಾತರಿಗೆ ಪೂರಕವಾಗುವ ಒಂದಾದರೂ ಯೋಜನೆ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಸಮ್ಮಾನ್ ಯೋಜನೆಗೆ ಈ ಹಿಂದೆ ರಾಜ್ಯ ಸರಕಾರ ಸಹ 4 ಸಾವಿರ ರೂ.ನೀಡಿ, ರೈತರ ಖಾತೆಗೆ ಡಿಬಿಟಿ ಮೂಲಕ ಒಟ್ಟು 10 ಸಾವಿರ ರೂ.ಜಮೆ ಮಾಡುತ್ತಿತ್ತು. ಆದರೆ, ಕಾಂಗ್ರೆಸ್ ಸರಕಾರ ಈ ಯೋಜನೆ ಸ್ಥಗಿತಗೊಳಿಸಿದೆ. ಅಲ್ಲದೆ, ಭೂಸಿರಿ, ರೈತ ವಿದ್ಯಾನಿ ಮತ್ತು ಜಿಲ್ಲೆಗೊಂದು ಗೋಶಾಲೆ ಸ್ಥಾಪನೆಯ ಹಿಂದಿನ ಸರಕಾರ ಪ್ರಸ್ತಾವನೆಗಳಿಗೆ ತಡೆ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಕಾರಕ್ಕೆ ಬಂದ ನಂತರ ರೈತಾಪಿ ವರ್ಗದ ಸಮಸ್ಯೆಗಳನ್ನು ಆಲಿಸದೆ ನಿರ್ಲಕ್ಷ್ಯ ಮಾಡುತ್ತಿದೆ. 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ನೆಪದಲ್ಲಿ ರೈತರ, ಮಹಿಳೆಯರ ಹಾಗೂ ಕೃಷಿ ಕಾಮರ್ಿಕರ ಹಿತ ಕಾಪಾಡುವುದನ್ನು ಮರೆತಿದೆ ಎಂದು ಆರೋಪಿಸಿದರು.
ಜಿಲ್ಲಾ ವಕ್ತಾರ ಎಚ್.ಸಿ.ಪಾಟೀಲ್ ಮಾತನಾಡಿ, ಕೇಂದ್ರ ಸರಕಾರದೊಂದಿಗೆ ರಾಜ್ಯ ಸರಕಾರ ಹಗೆತನ ಸಾಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿ ಯೋಜನೆಗಳಿಗೆ ಈ ಸರಕಾರಸ್ಪಂದಿಸುತ್ತಿಲ್ಲ. ಇದರಿಂದ ಜನತೆ ಹೈರಾಣಾಗುವಂತಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಲಲಿತಾ ಅನಪುರ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ವೆಂಕಟರಡ್ಡಿ ಅಬ್ಬೆತುಮಕೂರ, ಗುರು ಕಾಮಾ, ಶಂಕರ ಕರಣಗಿ, ಪರಶುರಾಮ ಕುರುಕುಂದಿ, ರಾಜಾ ಮುಕುಂದ ನಾಯಕ, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಮಂಜುನಾಥ ದಾಸನಕೇರಿ, ರಾಮು ನಾಯಕ, ಭೀಮರಾಯ ಜಂಗಳಿ, ಮಲ್ಲಿಕಾಜರ್ುನ ಕಂದಕೂರ, ರಾಘವೇಂದ್ರ ಯಕ್ಷಂತಿ, ದೇವೀಂದ್ರಪ್ಪ ಕೋನೆರ, ಮಲ್ಲಿಕಾಜರ್ುನ ಹೊನಗೇರಾ, ರಮೇಶ ದೊಡ್ಮನಿ, ವೀಣಾ ಮೋದಿ, ಸ್ನೇಹಾ ರಸಾಳಕರ, ಮಹಾದೇವಪ್ಪ ಗಣಪುರ, ಶಿವು ದಾಸನಕೇರಿ, ಚಂದ್ರು ಮುಂಡರಗಿ ಇದ್ದರು.