ಜಿಲ್ಲಾ ಪೊಲೀಸ್ ಶ್ವಾನದಳದ ‘ಅಗಸ್ತ್ಯ’ ನಿಧನ

CTD 10 AGASTYA DEATH (2)--005
Published on

ಸಕಲ ಗೌರವಾದರಗಳೊಂದಿಗೆ ಅಂತಿಮ ಸಂಸ್ಕಾರ ಕರ್ತವ್ಯ ಕೂಟದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಹಿರಿಮೆ
ಚಿತ್ರದುರ್ಗ:ಜಿಲ್ಲೆಯಲ್ಲಿನ ಅಪರಾಧ ಪತ್ತೆ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಿಲ್ಲಾ ಶ್ವಾನದಳದ ‘ಅಗಸ್ತ್ಯ’ (10) ಶನಿವಾರ ರಾತ್ರಿ ನಿಧನ ಹೊಂದಿದೆ.
ವಯೋಸಹಜ ಕಾಯಿಲೆಗಳಿಂದ ನಿಧನ ಹೊಂದಿದ ಅಗಸ್ತ್ಯನ ಅಂತಿಮ ಸಂಸ್ಕಾರ, ಭಾನುವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸಕಲ ಸರ್ಕಾರಿ ಗೌರವಾದರಗಳೊಂದಿಗೆ ನಡೆಯಿತು.
ಎಸ್‌ಪಿ ಧರ್ಮೇಂದರ್‌ಕುಮಾರ್‌ಮೀನಾ, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿಎಆರ್ ಡಿವೈಎಸ್‌ಪಿ ಗಣೇಶ್ ಮತ್ತಿತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಹತ್ತು ವರ್ಷ, 4 ತಿಂಗಳಿನ ಅಗಸ್ತ್ಯ ನಿವೃತ್ತಿಯ ಅಂಚಿನಲ್ಲಿತ್ತು. ಈ ಕುರಿತು ಮೇಲಧಿಕಾರಿಗಳಿಗೆ ಶ್ವಾನದಳದ ಅಧಿಕಾರಿಗಳು ಪತ್ರ ಬರೆದಿದ್ದರು.
ದಳದ ಹಿರಿಯ ‘ಅಗಸ್ತ್ಯ’ 2016ರಲ್ಲಿ ನಡೆದಿದ್ದ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಕ್ರಮವಾಗಿ ಚಿನ್ನದ ಮತ್ತು ಬೆಳ್ಳಿ ಪದಕಕ್ಕೆ ಭಾಜನವಾಗಿತ್ತು. ಸದ್ಯಕ್ಕೆ ದಳದಲ್ಲಿ ‘ಲಿಯೋ’ ಹಾಗೂ ‘ದ್ರೋಣ’ ಅಪರಾಧ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net