ಜಿಲ್ಲಾ ಪತ್ರಕರ್ತರ ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

12_HSN_02
Published on

ಹಾಸನ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡದ ಮೇಲ್ಬಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೆಚ್ಚುವರಿ ಕೊಠಡಿಗಳು ಹಾಗೂ ಸಭಾಂಗಣದ ನಿರ್ಮಾಣಕ್ಕೆ ಭಾನುವಾರ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಿವಾನಂದ ತಗಡೂರು ಅವರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಡಿಯ ಹೆಚ್ಚುವರಿ ಕಟ್ಟಡದ ಶಂಕು ಪೂಜೆ ಮಾಡಲಾಗಿದೆ. ಪತ್ರಕರ್ತರ ಸಂಘ ಎಂದರೆ ಒಂದು ವಿಶೇಷವಾದ ಸ್ಥಾನಮಾನವಿದೆ. ಕ್ರಿಯಾತ್ಮಕವಾಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿರುವುದು ಒಂದು ಕಡೆಯಾದರೆ ವ್ಯವಸ್ಥಿತವಾದ ಭವನ ಇದಾಗಿದೆ. ವಸತಿ ವ್ಯವಸ್ಥೆ ಸೇರಿದಂತೆ ಎಲ್ಲ ಒಳಗೊಂಡ ವಿಶೇಷ ಪತ್ರಕರ್ತರ ಭವನ ಹಾಸನದಲ್ಲಿದೆ. ಆದಷ್ಟು ಬೇಗ ಈಗ ಆರಂಭವಾಗಿರುವ ಕಾಮಗಾರಿಯನ್ನು ಮುಗಿಸಿ ನಾಲ್ಕು ತಿಂಗಳಲ್ಲೇ ಉದ್ಘಾಟನೆ ಆಗಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಚ್. ವೇಣುಕುಮಾರ್ ಮಾತನಾಡಿ, ಈ ಕಟ್ಟಡ ನಿರ್ಮಾಣಕ್ಕೆ ಹಾಸನ ಶಾಸಕರಾದ ಎಚ್.ಪಿ. ಸ್ವರೂಪ್ ಅವರು ಮೊದಲ ಅನುದಾನ ನೀಡಿದ್ದಾರೆ. ಎಲ್ಲರ ಸಹಕಾರದೊಂದಿಗೆ ಕಟ್ಟಡ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಇದೆ ವೇಳೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ. ಮದನ್ ಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಹರೀಶ್, ಕಾರ್ಯದರ್ಶಿ ಪಿ.ಎ. ಶ್ರೀನಿವಾಸ್, ಸಿ.ಬಿ. ಸಂತೋಷ್, ಮಾಜಿ ಅಧ್ಯಕ್ಷರಾದ ಬಿ.ಆರ್. ಮಂಜುನಾಥ್, ಬಿ.ಆರ್. ಉದಯಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಪ್ರಕಾಶ್, ಪದಾಧಿಕಾರಿಗಳು, ಜಿಲ್ಲಾ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net