

ಚಿತ್ರದುರ್ಗ: ನ್ಯಾಯಾಂಗ ಇಲಾಖೆ,ನಗರಸಭೆ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದಿಂದ ಜಿಲ್ಲಾ ನ್ಯಾಯಾಲಯದ ಬಳಿ ಶನಿ ವಾರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯಾಲಯ ಮತ್ತು ಜಿಲ್ಲಾ ಖಜಾನೆಯ ಸಮೀಪದ ಅಂಗಡಿ ಮುಂಗಟ್ಟು ಮಾಲೀಕ ರಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ತಿಳಿವಳಿಕೆ ನೀಡಿದರು. ಇದೇ ಸಂದರ್ಭ ದಲ್ಲಿ ಒನಕೆ ಓಬವ್ವ ವೃತ್ತದಲ್ಲಿ ಸ್ವಚ್ಛತೆಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.
ಅಪರ ಜಿಲ್ಲಾ ನ್ಯಾಯಾಧೀಶರಾದ ಎಸ್.ಎನ್.ಕಲ್ಕಣಿ,ಬಿ.ಕೆ.ಕೋಮಲಾ,ಸಿವಿಲ್ ನ್ಯಾಯಾಧೀಶರಾದ ಕೆಂಪರಾಜು,ಚೈತ್ರಾ,ಉಜ್ವಲಾವೀರಣ್ಣ,ಗೀ ತಾಕುಂಬಾರ,ನೇಮಿಚಂದ್ರ,ಅನಿತಾಕುಮಾರಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್,ನಗರಸಭೆ ಆಯುಕ್ತೆ ರೇಣುಕಾ,ಪರಿಸರ ಇಂಜಿನಿಯರ್ ಜಾಫರ್,ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್,ಕಾರ‌್ಯದರ್ಶಿಗಂಗಾಧರ್, ವಕೀಲ ಉಮೇಶ್ ಹಾಗೂ ನ್ಯಾಯಾಂಗ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.