ಜಿಲ್ಲಾ ಖಜಾನೆಯಿಂದ ದೇಗುಲಕ್ಕೆ ಒಡವೆಗಳು ರವಾನೆ

ಜಿಲ್ಲಾ ಖಜಾನೆಯಿಂದ ದೇಗುಲಕ್ಕೆ ಒಡವೆಗಳು ರವಾನೆ
Published on

ಹಾಸನ : ನ.2ರಿಂದ ಆರಂಭವಾಗುವ ಜಿಲ್ಲೆಯ ಆಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ದೇವಿಯ ಆಭರಗಳನ್ನು ಬೆಳ್ಳಿ ರಥದ ಮೂಲಕ ಮೆರವಣಿಗೆ ಮೂಲಕ ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇವಾಲಯಕ್ಕೆ ತರಲಾಯಿತು.

ಖಜಾನೆ ಮುಂದೆ ಅರ್ಚಕರು ಆಭರಣಗಳಿಗೆ ಪೂಜೆ ಸಲ್ಲಿಸಿದ ನಂತರ ಒಡವೆಗಳನ್ನು ಪಲ್ಲಕ್ಕಿ ಮೇಲಿರಿಸಿ ರಥದ ಮೇಲೆ ಇರಿಸಲಾಯಿತು. ಮೆರವಣಿಗೆಗೂ ಮುನ್ನ ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜು ಹಾಗೂ ಉಪವಿಭಾಗಾಧಿಕಾರಿ ಮಾರುತಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೆರವಣಿಗೆ ವೇಳೆ ಮಂಗಳವಾದ್ಯ ತಂಡದ ಮೂಲಕ ಒಡವೆಗಳನ್ನು ದೇವಾಲಯಕ್ಕೆ ತರಲಾಯಿತು. ಈ ವೇಳೆ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಭದ್ರತೆ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net