ಜಿಲ್ಲಾ ಕ್ರೀಡಾಶಾಲೆಗೆ ಕ್ರೀಡಾಪಟುಗಳ ಆಯ್ಕೆ

sportsday
Sports, set of athletes of various sports disciplines. Isolated vector silhouettes. Run, soccer, hockey, volleyball, basketball, rugby, baseball, american football, cycling, golf
Published on

ಚಿತ್ರದುರ್ಗ: ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ವಾಲಿಬಾಲ್ ಹಾಗೂ ಅಥ್ಲೆಟಿಕ್ಸ್ ಕ್ರೀಡೆಗಳ ತರಬೇತಿಗೆ ಜಿಲ್ಲೆಯ ಬಾಲಕ ಹಾಗೂ ಬಾಲಕಿಯರಿಗೆ ಪ್ರವೇಶ ನೀಡಲಾಗುವುದು. ಪ್ರವೇಶ ಪಡೆದವರಿಗೆ ಉಚಿತ ಊಟ, ವಸತಿ ಮತ್ತು ಕ್ರೀಡಾ ಪರಿಣಿತರಿಂದ ತರಬೇತಿ ನೀಡಲಾಗುವುದು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 4ನೇ ತರಗತಿ ಓದುತ್ತಿರುವ ಮತ್ತು 2025ರ ಜೂನ್ 1ಕ್ಕೆ 10 ವರ್ಷ ಮತ್ತು 11 ವರ್ಷ ಮೀರದ ಬಾಲಕ ಮತ್ತು ಬಾಲಕಿಯರು ಈ ಆಯ್ಕೆಯಲ್ಲಿ ಭಾಗವಹಿಸಬಹುದು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರಕಟಿಸಿದ ದಿನಾಂಕಗಳಂದು ಬೆಳಗ್ಗೆ 11ಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಫೆ.3ರಂದು ಮೊಳಕಾಲ್ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜು, 4ರಂದು ಚಳ್ಳಕೆರೆ ತಾಲೂಕು ಕ್ರೀಡಾಂಗಣ, 5ರಂದು ಹೊಳಲ್ಕೆರೆ ತಾಲೂಕು ಕ್ರೀಡಾಂಗಣ, ಫೆ.11ರಂದು ಹೊಸದುರ್ಗ ತಾಲೂಕು ಕ್ರೀಡಾಂಗಣ, 12 ರಂದು ಹಿರಿಯೂರು ತಾಲೂಕು ಕ್ರೀಡಾಂಗಣ, ಫೆ.13ರಂದು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದೇ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಫೆ.13ರಿಂದ 15ರವರೆಗೆ ಬೆಳಗ್ಗೆ 10ಕ್ಕೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವಾಲಿಬಾಲ್ ತರಬೇತುದಾರ ಮಹಮ್ಮದ್ ಮುಹೀಬುಲ್ಲಾ(9611673475), ಅಥ್ಲೆಟಿಕ್ಸ್ ತರಬೇತುದಾರ ತಿಪ್ಪಣ್ಣ ಎಸ್. ಮಾಳಿ(9380889647)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net