ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ

Yoga
Published on

ಚಿತ್ರದುರ್ಗ: ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲೆಂಜರ್ಸ್‌ ಸ್ಪೋರ್ಟ್ಸ್ ಕ್ಲಬ್‌ನಿಂದ 11ನೇ ವಿಶ್ವ ಯೋಗ ದಿನಾಚರಣೆಯನ್ನು ಶುಕ್ರವಾರ ವಿಶೇಷವಾಗಿ ಆಚರಿಸಲಾಯಿತು.

ಯೋಗ ಮಾರ್ಗದರ್ಶಕರ ನೇತೃತ್ವದಲ್ಲಿ ನೂರಾರು ಯೋಗಾಸಕ್ತರು ಬಹು ಉತ್ಸುಕತೆಯಿಂದ ಪಾಲ್ಗೊಂಡು ಸಾಮೂಹಿಕವಾಗಿ ಯೋಗ ಪ್ರದರ್ಶಿಸಿದರು. ವಿವಿಧ ಆಸನಗಳು ಗಮನ ಸೆಳೆದವು.

ಕ್ಲಬ್‌ನ ಅಧ್ಯಕ್ಷ ಸಂತೋಷ್‌ಕುಮಾರ್, ಪದಾಧಿಕಾರಿಗಳಾದ ಭರತ್ ಪೈಲ್ವಾನ್, ಬಾಬು, ಜಗದೀಶ್, ಸಾಮ್ರಾಟ್, ಶಾಮ್, ಜಯದೇವ್, ಸಾಗರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net