ಜಿಲ್ಲಾ ಕ್ರೀಡಾಂಗಣದ ಪ್ರವೇಶ ಶುಲ್ಕ ರದ್ದುಪಡಿಸುವಂತೆ ಆಗ್ರಹ

0102
Published on

ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದ ಪ್ರವೇಶಕ್ಕೆ ಹಾಗೂ ಕ್ರೀಡಾಪಟುಗಳಿಗೆ ವಿಧಿಸಿರುವ ಶುಲ್ಕ ರದ್ದುಪಡಿಸುವಂತೆ ಆಗ್ರಹಿಸಿ ಸಾಯಿ ಗ್ರೂಪ್​ ಆಫ್​ ಫ್ರೆಂಡ್ಸ್​ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕ್ರೀಡಾಭ್ಯಾಸ ಮಾಡುವ ಕ್ರೀಡಾಪಟುಗಳಿಗೆ, ವಾಯುವಿಹಾರಕ್ಕೆ ಆಗಮಿಸುವವರಿಗೆ ಪ್ರತಿನಿತ್ಯ ಶುಲ್ಕ ವಿಧಿಸಿ ಕ್ರೀಡಾಂಗಣ ಪ್ರವೇಶಿಸಲು ಕಷ್ಟವಾಗುತ್ತದೆ. ಇದರಿಂದ ಪೊಲೀಸ್​ ಇಲಾಖೆ, ಭಾರತೀಯ ಸೈನ್ಯದಲ್ಲಿ ಸೇರಬಯಸುವ ಆಕಾಂಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಜಿಲ್ಲಾ ಕ್ರೀಡಾಂಗಣದ ಪ್ರವೇಶ ಶುಲ್ಕ ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರವಿಣ ಪಾಟೀಲ, ಧನರಾಜ ಧಾವಡೆ, ಅಶೋಕ ಯಳ್ಳೂರಕರ, ಯಲ್ಲಪ್ಪ ಆನಂದಪುರೆ, ವಿನಾಯಕ ಪಾಟೀಲ, ವಿಕ್ರಮ ಅಪಟೇಕರ ಸೇರಿದಂತೆ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net