ಜಿಲ್ಲಾ ಕ್ರೀಡಾಂಗಣ ಸರಿಪಡಿಸಿದ ಕ್ರೀಡಾಪಟುಗಳು

IMG-20241216-WA0009
Published on

ಚಾಮರಾಜನಗರ: ನಗರದಲ್ಲಿ ಇತ್ತೀಚೆಗೆ ಮೂರು ದಿನಗಳ ಕಾಲ ಸುರಿದ ಸೈಕ್ಲೋನ್ ಮಳೆಯಿಂದ ಹಾಳಾಗಿದ್ದ ನಗರದ ಡಾ.ಬಿ.ಆಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವನ್ನು ಸಮತಟ್ಟು ಮಾಡುವ ಕಾರ್ಯಕ್ಕೆ ಕ್ರೀಡಾಪಟುಗಳು ಮುಂದಾರು.

ಕರ್ನಾಟಕ ಕನ್ನಡ ರಕ್ಷಣಾ ಸೇನೆಯ ನಗರ ಘಟಕ ಪ್ರದಾನ ಕಾರ್ಯದರ್ಶಿ ಹಾಗೂ ಕ್ರೀಡಾಪಟು ಶ್ರೀನಿವಾಸ್ ಅವರು ಮಾತನಾಡಿ, ಮಳೆಯಿಂದ ಕೆಸರುಗದ್ದೆಯಾಗಿದ್ದ ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಂಬಂಧ ಪಟ್ಟ ಯುವಜನ ಸೇವಾ ಮತ್ತು ಕ್ರೀಡಾಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೆ15 ದಿನವಾದರೂ ಅವರು ನಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದರು.

ಇಲಾಖೆಯವರ ನಿರ್ಲಕ್ಷ್ಯಕ್ಕೆ ಬೇಸತ್ತು ಕ್ರೀಡಾಪಟುಗಳೇ ತಮ್ಮ ಸ್ವಂತ ಹಣ ಖರ್ಚು ಮಾಡಿ ಕ್ರೀಡಾಂಗಣದ ಮಣ್ಣನ್ನು ಸಮತಟ್ಟು ಮಾಡಿ, ಆಟಗಾರರಿಗೆ ಅನೂಕೂಲ ಮಾಡಿಕೊಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಾರಕ್ಕೂ ಮುಂಚೆ ಕ್ರೀಡಾಂಗಣ ವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಾರೆ. ಕ್ರೀಡಾಪಟುಗಳು ಮನವಿ ಕೊಟ್ಟರೇ ಅದಕ್ಕೆ ಪ್ರತಿಕ್ರಿಯೆ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 20 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದ್ದು, ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಅಭಿವೃದ್ದಿ ಕಾರ್ಯವಾಗಿಲ್ಲ. ಮಳೆಯಿಂದ ಕೆಸರುಗದ್ದೆಯಾಗಿದ್ದ ಕ್ರೀಡಾಂಗಣದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಂಬಂಧ ಪಟ್ಟ ಯುವ ಜನ ಸೇವೆ ಮತ್ತು ಕ್ರೀಡಾಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೆ 15 ದಿನವಾದರೂ ಅವರು ನಮ್ಮ ಮನವಿಗೆ ಸ್ಪಂದಿಸಲಿಲ್ಲ ಎಂದು ಹೇಳಿದರು.

ನಾಡಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಾರಕ್ಕೂ ಮುಂಚೆ ಕ್ರೀಡಾಂಗಣ ವನ್ನು ಸ್ವಚ್ಛಗೊಳಿಸುವ ಕಾರ್ಯಕ್ಜೆ ಅಧಿಕಾರಿಗಳು ಮುಂದಾಗುತ್ತಾರೆ. ಕ್ರೀಡಾಪಟುಗಳು ಮನವಿ ಕೊಟ್ಟರೇ ಅದಕ್ಕೆ ಪ್ರತಿಕ್ರಿಯೆ ಬರುವುದಿಲ್ಲ ಎಂದರು.

ಒಂದು ಕ್ರೀಡೆ ಹಾಡಲು ಆಟಗಾರರು 2ರಿಂದ 3 ಸಾವಿರ ರೂಗಳನ್ನು ಇಲಾಖೆಯವರಿಗೆ ಪಾವತಿಸಬೇಕು. ಇಲಾಖೆಯವರು ಕ್ರೀಡಾಂಗಣಕ್ಕೆ ಕಾರು, ಮೋಟಾರ್ ಸೈಕಲ್ ಬಾರದಂತೆ ಗೇಟ್ ಗೆ ಬೀಗಹಾಕಬೇಕು. ಯಾವುದೇ ಕಾರಣಕ್ಕೂ ಖಾಸಗಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಕ್ರೀಡಾಪಟು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net