

ನಗರದ ಕನಕ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘದಲ್ಲಿ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ.ಎಸ್. ಶಾಂತೇಗೌಡ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶಾಂತೇಗೌಡರು, ಸಮಾಜದ ಕೆಲಸ ಮಾಡಿಕೊಂಡು ಬರುತ್ತಿದ್ದು, ಈಗ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದಾಗಿ ಸಮುದಾಯದ ಕೆಲಸ ಮಾಡುವ ಗುರಿ ಹೊಂದಿದ್ದೇನೆ ಎಂದರು. ಕನಕ ಭವನಕ್ಕೆ ಕಾಂಪೌಂಡ್ ನಿರ್ಮಾಣ, ಅಡುಗೆ ಮನೆ ಮುಂತಾದವುಗಳ ನಿರ್ಮಾಣದ ಜೊತೆಗೆ ಕುರುಬ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಕಳೆದ ಹತ್ತಾರು ವರ್ಷಗಳಿಂದ ಕುರುಬರ ಸಂಘದ ಅಧ್ಯಕ್ಷರಾಗಿದ್ದ ಕೆ.ಎಂ. ಮಂಜುನಾಥ್ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಸಹಕರಿಸಿದ ಎಲ್ಲಾ ಸರ್ವ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಕೆ.ಎ. ಗೋಪಾಲಕೃಷ್ಣ, ಕೆ.ವಿ. ಮಂಜುನಾಥ, ಎನ್.ಎಚ್. ಮೋಹನ್, ರೇಖಾಹುಲಿಯಪ್ಪಗೌಡ, ಡಿ.ಸಿ. ಪುಟ್ಟೇಗೌಡ, ಎಚ್.ಪಿ ಮಂಜೇಗೌಡ, ಲಾಯರ್ ಮಂಜುನಾಥ, ರಾಮಣ್ಣ, ಎಚ್.ಎಸ್. ಪುಟ್ಟೇಗೌಡ, ದೇವರಹಳ್ಳಿ ಡಿ.ಎಂ ಜನಾರ್ಧನ, ಸಿದ್ದೇಗೌಡ, ಬೀರೇಗೌಡ ದೇವೇಗೌಡ, ರೇವಣ್ಣ, ಡಿ.ಎಸ್. ಚಂದ್ರೇಗೌಡ, ಭದ್ರೇಗೌಡ, ಧರ್ಮೇಶ್, ತ್ರಿಭುವನ್, ಪುಷ್ವರಾಜ್, ರಾಮಣ್ಣ, ಲಕ್ಷ್ಮೀಕಾಂತ್, ಜಗಧೀಶ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.