ಜಿಲ್ಲಾ ಕುರುಬ ಸಂಘಕ್ಕೆ ಐಕೂರು ಸಾರಥಿ

23ydg01
Published on

ಯಾದಗಿರಿ: ಜಿಲ್ಲಾ ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಸಮಾಜದ ಮುಖಂಡ ಮಲ್ಲಣ್ಣ ಐಕೂರ ಆಯ್ಕೆಯಾಗಿದ್ದಾರೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರದ ಅಹಿಂದ ಕಾರ್ಯಲಯದಲ್ಲಿ ಕರೆದಿದ್ದ ಸಭೆಯಲ್ಲಿ ಸಂಘದ ನಿದರ್ೇಶಕರೆಲ್ಲರ ಒಪ್ಪಿಗೆ ಮೇರೆಗೆ ಮಲ್ಲಣ್ಣ ಐಕೂರುರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಧ್ಯಕ್ಷರಾಗಿ ಹಣಮಂತರಾಯಗೌಡ ತೇಕರಾಳ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಯ್ಯ ಮಗ್ಗ ಹಾಗೂ ಖಜಾಂಚಿಯಾಗಿ ಕೃಷ್ಣ ಬನ್ನೆರ ಗುರುಮಿಠಕಲ್ರನ್ನು ಆಯ್ಕೆ ಮಾಡಲಾಗಿದೆ ಎಂದರು.

ನೂತನ ಪದಾಕಾರಿಗಳು ಜಿಲ್ಲೆಯಲ್ಲಿ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು. ಯುವಕರಿಗೆ ಉನ್ನತ ಶಿಕ್ಷಣ ಕೊಡಿಸುವ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಪ್ರಸ್ತುತ ಸಮಾಜದ ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಐಕೂರ, ಸಮಾಜದ ಹಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಸುಬ್ರಮಣ್ಯ ಮೈಸೂರು, ಮುಖಂಡರಾದ ಶರಣಪ್ಪ ಸಲಾದಪುರ, ವಿಶ್ವನಾಥ ನೀಲಹಳ್ಳಿ. ಸಿದ್ದರಾಮಪ್ಪ ಅರಿಕೇರಿ, ಡಾ.ಭೀಮಣ್ಣ ಮೇಟಿ, ಗಿರಿಯಪ್ಪಗೌಡ ಬಾಣತಿಹಾಳ, ಬಸವರಾಜಪ್ಪ ಗೌಡ ವಿಭೂತಿಹಳ್ಳಿ, ಪ್ರಭು ವಾರದ, ಶಿವು ಪೂಜಾರಿ, ಸಾಯಿಬಣ್ಣ ಕೆಂಗೇರಿ, ಮರೇಪ್ಪ ಜಡಿ, ಲಿಂಗರಾಜ ಬಾಚಿಮಟ್ಟಿ, ನಿಂಗಣ್ಣ ಬೂದಿಗುಂಪಿ, ಭಾಗಣ್ಣ ತಡಬಿಡಿ, ಸಿದ್ದಲಿಂಗಪ್ಪ ಗುಂಡಳ್ಳಿ, ಚೆನ್ನಕೇಶವಗೌಡ ಬಾಣತಿಹಾಳ, ಭೀಮರಾಯ ುೂಲಿಮನಿ, ಮಲ್ಲಿಕಾಜರ್ುನ ಕರಿಕಳ್ಳಿ, ಶಂಕ್ರಪ್ಪ ಗೊಂದೆನೂರ, ಮಲ್ಲು ದಂಡಿನ, ದೇವೇಂದ್ರಪ್ಪ ಕಡೇಚೂರ, ಮಲ್ಲಯ್ಯ ಕಸಬಿ, ಭೀಮರಾಯ ಭಂಡಾರಿ, ಕೃಷ್ಣ ಬಾದ್ಯಾಪುರ, ರಂಗನಗೌಡ ದೇವಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net