

ಹಾಸನ: ರೈತರ ಸಮಸ್ಯೆ ಬಗ್ಗೆ ಹೋರಾಟ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಜನರ ಜತೆ ಇರುವ ನನ್ನನ್ನು ಕಾಂಗ್ರಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ಕಿಸಾನ್ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದು ದಿವಾಕರ್ ಗೌಡ ತಿಳಿಸಿದರು.
ಕಳೆದ 3 ವರ್ಷದಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ, ಕೆಂಪೇಗೌಡರ ಕಂಚಿನ ಪ್ರತಿಮೆ ಸೇರಿದಂತೆ ಹೆಸರಾಂತ ಮಹಾನ್‌ನಾಯಕರ ಪ್ರತಿಮೆ ನಿರ್ಮಿಸುವಲ್ಲಿ ಹೋರಾಟ ಮಾಡಿದ್ದೇನೆ ಎಂದ ಅವರು, ಎಲ್ಲಾ ಜನಾಂಗದ ರೈತಪರ ಹೋರಾಟಗಳನ್ನು ಮಾಡಿದ್ದೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನ್ನ ಸಮಾಜ ಸೇವೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಕಾಂಗ್ರೆಸ್ ಮುಖಂಡರ ಶಿಫಾರಸ್ಸಿನಂತೆ ನನ್ನನ್ನು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲಾ ನಾಯಕರು ಹಾಗೂ ಮುಖಂಡರುಗಳಿಗೆ ಧ್ಯನ್ಯವಾದ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರಸ್ ಮುಖಂಡರಾದ ನಟೇಶ್, ರಾಜು ಇದ್ದರು