

ಹಾಸನ: ಶುಕ್ರವಾರ ಮಧ್ಯರಾತ್ರಿ ಒಂದು ಗಂಟೆ ಸಮಯದಲ್ಲಿ ಎ.ಎಸ್.ಪಿ. ತಮ್ಮಯ್ಯ ಅವರ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಅಧಿಕಾರಿಗಳ ಮತ್ತು ಸಿಬ್ಬಂದಿಗಳು ಜಿಲ್ಲಾ ಕಾರ್ಯಾಗೃಹದ ಮೇಲೆ ದಾಳಿ ನಡೆಸಿ 18 ಮೊಬೈಲ್‌ಗಳು 20 ಗ್ರಾಂ ತೂಕದ ಗಾಂಜಾ ಹಾಗೂ ಸಿಗರೇಟ್ ಪ್ಯಾಕ್‌ಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನ ವಶಪಡಿಸಿಕೊಂಡಿದು,್ದ ಈ ಸಂಬಂಧ 18 ಆರೋಪಿಗಳಿ ವಿರುದ್ಧ 5 ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ಕಳೆದ ಎರಡು ಮೂರು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಚಾರಣಾ ಕೈದಿ ಪ್ರೊಫೈಲ್ ಫೋಟೋ ಚೇಂಜ್ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ಇದರಲ್ಲಿ 7ಸ್ಮಾರ್ಟ್ ಫೋನ್, 11 ಕೀಪ್ಯಾಡ್ ಮೊಬೈಲ್, 20 ಗ್ರಾಂ ತೂಕದ ಗಾಂಜಾ ಮತ್ತು ಸಿಗರೇಟ್ ಪ್ಯಾಕೆಟ್‌ಗಳನ್ನ ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.
ಕಾರಾಗೃಹದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನ, ಕರ್ತವ್ಯಲೋಪ ಅಥವಾ ಅವರೇ ಶಾಮೀಲಾಗಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾರ್ಯಾಗೃಹ ಡಿಜಿ ಅವರಿಗೆ ವರದಿ ಸಲ್ಲಿಸಲಾಗುವುದು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು ಸೂಕ್ತ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಜೈಲಿನಲ್ಲಿ ಕುಳಿತುಕೊಂಡು ಆರೋಪಿಗಳು ವಿಡಿಯೋ ಕಾಲ್, ಚಾಟಿಂಗ್ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೊಫೈಲ್ ಫೋಟೋಗಳನ್ನು ಚೇಂಜ್ ಮಾಡುವುದು ಹಾಗೂ ರಾತ್ರಿಯ ವೇಳೆ ಮೊಬೈಲ್‌ಗಳು ಆನ್‌ಲೈನ್ ನೆಟ್‌ವರ್ಕ ತೋರಿಸಿರುವ ಬಗ್ಗೆ ಮಾಹಿತಿಗಳಿದ್ದು. ಈಗಾಗಲೇ ನಮ್ಮ ತಂಡ ಪರಿಶೀಲನೆ ನಡೆಸುತ್ತಿದೆ ಎಂದರು
ಈಗಾಗಲೇ ಐದಾರು ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಯ ಕೈಯಲ್ಲಿ ಗಾಂಜಾ ಪತ್ತೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದರು
ಆರೋಪಿಗಳ ವಿವರ
ಆರೋಪಿಗಳನ್ನು ಹಳೇಬಿಡು ಹೋಬಳಿಯ ಸಿದ್ದಾಪುರ ಗ್ರಾಮದ ಶರತ್ ಸಿ ಬ್ಯಾರೇಕ್ ಉಮಾ ಮಹೇಶ್, ಹೊಳೆನರಸೀಪುರ ತಾಲ್ಲೂಕು. ಬಿಟ್ಟಗೋಡನಹಳ್ಳಿಯ ಬೈರಾಜ್ (50) ಹಾಸನ ತಾಲ್ಲೂಕು ಗುಡ್ಡಹಳ್ಳಿ ಗ್ರಾಮದ ಸಂಜು (29), ಮಂಡ್ಯ ಜಿಲ್ಲೆಯ ಬಿ.ಹೊಸೂರು ಗ್ರಾಮದ ಶಿವಕುಮಾರ್, ಸಕಲೇಶಪುರದ ಕುಶಾಲನಗರ ಬಡಾವಣೆಯ ಐಷಾನ್ ಕುರೇಶಿ (27), ಬಾಗೂರು ಗ್ರಾಮದ ಮಲ್ಲಿಕ್ (27), ಅರಸೀಕೆರೆಯ ಲಕ್ಷ್ಮೀಪುರ ಬಡಾವನೆಯ ರಘು (29), ಹಾಸನದ ಶ್ರೀನಗರದ ರಹೀಲ್ (29), ಆದಿಲ್ (36), ಕಮ್ಮಾರಹಳ್ಳಿಯ ಸುದರ್ಶನ್ (42), ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ಯಶ್ವಂತ್ ನಾಯ, ಹೊಳೆನರಸೀಪುರ ತಾಲ್ಲೂಕು ಕಡವಿನಕೋಟೆಯ ಮೋಹನ್ ಕುಮಾರ್ (32), ಹಾಸನ ಪೆನ್‌ಷನ್ ಮೊಹಲ್ಲಾದ ಅಬ್ರಾನ್ (23), ರಂಗೋಲಿ ಹಳ್ಳದ ತೇಜಸ್ (21), ಹಾಸನ ತಾಲ್ಲೂಕು ಸತ್ತಿಗರಹಳ್ಳಿಯ ನಾಗೇಶ್ ಹಾಗೂ ಇನ್ನೂ ಮೂವರ ಮೇಲೆ (ವಿಳಾಸ ಪತ್ತೆಕಾರ್ಯ ಕೈಗೊಂಡಿದೆ.) ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.