

ಹಾಸನ: ನಾಡು, ನುಡಿ, ಜಲ, ಗಡಿ, ರೈತಪರವಾಗಿ ಸುಮಾರು 23 ಸಂಘಟನೆಗಳು ಒಟ್ಟಾಗಿ ಜಿಲ್ಲಾ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ರಚಿಸಿದ್ದು ಮುಂದಿನ ದಿನಗಳಲ್ಲಿ ನ್ಯಾಯದ ಪರವಾಗಿ ಹೋರಾಟ ನಡೆಸಲಾಗುವುದೆಂದು ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಶಂಕರಗೌಡ ಅವರು ಹೇಳಿದರು.
ಕೂಲಿ ಕಾರ್ಮಿಕರಿಗೆ ನ್ಯಾಯ ಕೊಡಿಸುವುದು, ವಾಣಿಜ್ಯ ಕಟ್ಟಡಗಳಲ್ಲಿ ಆಂಗ್ಲಭಾಷೆ ನಾಮಫಲಕ ತೆರವುಗೊಳಿಸಿ ಕನ್ನಡ ಭಾಷೆಗೆ ಆದ್ಯತೆ ನೀಡುವುದು. ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರಕ್ಕೆ ಕಡಿವಾಣ ಹಾಕುವುದು, ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೊ?ಗ ಕೊಡಿಸುವುದಕ್ಕಾಗಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಕನ್ನಡಪರ ಹೋರಾಟಗಳಲ್ಲಿ ಸಕ್ರಿಯರಾಗಿರುವ ನಾಗರಿಕರು ಒಕ್ಕೂಟ ಸೇರಬಹುದು. ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ಅನಿವಾರ್ಯವಾಗಿರುವುದರಿಂದ ಸಮಾನ ಮನಸ್ಕರೆಲ್ಲ ಒಟ್ಟಾಗಿ ಒಕ್ಕೂಟ ರಚಿಸಿದ್ದೇವೆಂದರು.
ಜಿಲ್ಲಾ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹರೀಶ್‌ಗೌಡ, ಕಾರ್ಯದರ್ಶಿ ದಿನೇಶ್‌ಗೌಡ, ಖಜಾಂಚಿ ಹೆಚ್.ಎಂ.ರಾಘವೇಂದ್ರ, ಉಪಾಧ್ಯಕ್ಷ ಅನಂತರಾಜ್, ಪಾಂಡುರಂಗ ಇದ್ದರು.