

ಹಾಸನ: ಜಿಲ್ಲಾ ಒಕ್ಕಲಿಗರ ಸಂಘಕ್ಕೆ ನಿವೇಶನ ದಾನ ನೀಡಿರುವ ಪಿಚ್ಚರ್ ಪ್ಯಾಲೇಸ್ ಸಂಸ್ಥಾಪಕರಾದ ದಿ.ಎಂ.ಆರ್.ಪುಟ್ಟಸ್ವಾಮಯ್ಯ ಅವರ ಹೆಸರಿನ ನಾಮಫಲಕವನ್ನು ಶನಿವಾರ ಒಕ್ಕಲಿಗರ ಸಂಘದ ಕಟ್ಟಡಕ್ಕೆ ಅಳವಡಿಸಲಾಯಿತು.ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ ನಾಮಫಲಕ ಅನಾವರಣಗೊಳಿಸಿದರು. ಈ ವೇಳೆ ಪಾಲಿಕ ಹೊಟೇಲ್ ಮಾಲೀಕ ಗಣೇಶ್, ಹೆಮ್ಮಿಗೆಮೋಹನ್, ಎಚ್.ಕೆ. ಜವರೇಗೌಡ, ದೀಪುಗೌಡ,ಮಾರುತಿ ದೇವರಾಜು, ಪ್ರವೀಣ್‌ಗೌಡ ಹಾಗೂ ಎಲ್ಲಾ ನಿರ್ದೇಶಕರು ಹಾಜರಿದ್ದರು.ಈ ವೇಳೆ ಸಿಹಿ ಹಂಚಿ ಎಂ.ಆರ್. ಪುಟ್ಟಸ್ವಾಮಯ್ಯ ಅವರ ಕೊಡುಗೆ ಸ್ಮರಿಸಲಾಯಿತು.