ಜಿಲ್ಲಾ ಉಸ್ತುವಾರಿ ಸಚಿವರಿಂದ ಬರಗಾಲ ಪರಿಸ್ಥಿತಿ ವೀಕ್ಷಣೆ

photo_2023-11-27_18-12-27
Published on

ಬಾಗಲಕೋಟೆ: ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ ಅವರು ಜಮಖಂಡಿ ತಾಲೂಕಿನ ಬರಗಾಲ ಪರಿಸ್ಥಿತಿ ಸ್ಥಳಗಳಿಗೆ ಸೋಮವಾರ ಭೇಟಿ ವೀಕ್ಷಣೆ ಮಾಡಿದರು.

ಬರಪೀಡಿತ ಪ್ರದೇಶಗಳಾದ ತೊದಲಬಾಗಿ ಗ್ರಾಮದ ಕಬ್ಬು ಬೆಳೆ ಹಾನಿ ವೀಕ್ಷಿಸಿ ಗದ್ಯಾಳ ಗ್ರಾಮದಲ್ಲಿ ಇಮಾಮಸಾನ ನದಾಪ್ ಅವರ ಜಮೀನಿನಲ್ಲಾದ ಗೋವಿನ ಜೋಳ ಹಾನಿ ವೀಕ್ಷಿಸಿದರು. ಗೋಠೆ ಗ್ರಾಮದ ಅರ್ಜಿನ ನಾಟಿಕಾರ, ಶಾಂತವ್ವ ನಾಟಿಕಾರ ಅವರ ಜಮೀನಲ್ಲಿ ಹಾನಿಯಾದ ತೊಗತಿ, ಗೋವಿನಜೋಳ ಪರಿಶೀಲಿಸಿ ಅಲ್ಲಿ ಮೇವು ಸಂಗ್ರಹಣಾ ಕೇಂದ್ರ ಸ್ಥಾಪನೆ ಮಾಡುವ ಕುರಿತು ಸ್ಥಳ ಪರಿಶೀಲಿಸಿದರು.

ಕನ್ನೊಳ್ಳಿ ಗ್ರಾಮದಲ್ಲಿ ತೊಗರಿ ಬೆಳೆ ಹಾನಿ ವೀಕ್ಷಿಸಿ, ಕಡಪಟ್ಟಿ ಹಂಚಿನಾಳ ಗ್ರಾಮಗಳಲ್ಲಿ ನರೇಗಾ ಕಾಮಗಾರಿ ಪರಿಶೀಲಿಸಿದರು. ಹುನ್ನೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಹಿಪ್ಪರಗಿ ಆನೆಕಟ್ಟು ವೀಕ್ಷಿಸಿ, ಹನಗಂಡಿ ಗ್ರಾಮದಲ್ಲಿ ಬೆಳೆ ಹಾನಿಯಾಗಿರುವ ಕುರಿತು ಮತ್ತು ಮೇವು ಸಂಗ್ರಹಣ ಕೇಂದ್ರ ಸ್ಥಾಪಿಸುವ ಕುರಿತು ಹಾಗೂ ನರೇಗಾ ಕಾಮಗಾರಿ ಪರಿಶೀಲಿಸಿದರು.

ಬರಗಾಲ ಪರಿಸ್ಥಿತಿ ವೀಕ್ಷಣ ವೇಳೆ ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net