ಜಿಲ್ಲಾ ಉಸ್ತುವಾರಿ ಸಚಿವರ ಸಭೆ

CTD M.Renuka-----
Published on

ಡಿಪಿಎನ್ ಶ್ರೇಷ್ಠಿ,ಚಿತ್ರದುರ್ಗ

ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರದಿಂದ ಅನುಮತಿ ಪಡೆಯಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿ ಗಳಿಗೆ ನಿರ್ದೇಶಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಆ.15 ರಂದು ಜಿಲ್ಲೆ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ.

ಈ ಹಿಂದೆ ಸಭೆ ನಡೆಸಿದ್ದ ಸಚಿವರು, ಪಕ್ಷದ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಸ್ತೆ ಅಗಲೀಕರಣ, ಅತಿಕ್ರಮ ತೆರವು ಹಾಗೂ ಕುಂಚಿಗನಾಳ್ ರಿ.ಸ.ನಂ.44 ರಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಿಸಿ ಕಚೇರಿ ನೂತನ ಕಟ್ಟಡವನ್ನು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸುವ ಹಾಗೂ ಹೊಸ ಕಟ್ಟಡವನ್ನು ನಗರದೊಳಗೆ ನಿರ್ಮಿಸುವ ಕುರಿತಂತೆ ಚರ್ಚಿಸಿದ್ದರು.

ಡಿಸಿ ಕಚೇರಿ ಹೊಸ ಕಟ್ಟಡಕ್ಕೆ ಈಗಾಗಲೇ 46 ಕೋಟಿ ರೂ.ಖರ್ಚಾಗಿದ್ದು, ಇನ್ನೂ 15 ಕೋಟಿ ರೂ.ಅಗತ್ಯವಿದೆ ಎಂದು ಅಂದಾಜಿಸ ಲಾಗಿತ್ತು. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬಿ.ಡಿ. ರಸ್ತೆ ಅಗಲೀಕರಣಕ್ಕೆ ಅನುಮತಿ ಹಾಗೂ ಡಿಸಿ ಕಚೇರಿ ಕಟ್ಟಡ ತ್ವರಿತ ಪೂರ್ಣ ಗೊಳಿಸಲು ಕ್ರಮ ವಹಿಸುವುದಾಗಿ ಹೇಳಿದ್ದರು. ಆದರೆ ಈಗ ಹೊಸ ಕಟ್ಟಡವನ್ನೇ ಕಾಲೇಜಿಗೆ ಹಸ್ತಾಂತರಿಸುವ ಆಲೋಚನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆಯಾಗಲಿದೆ.

ಅಗಲೀಕರಣಕ್ಕೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ಕೋಟ್ಯಂತರ ರೂ.ಅಗತ್ಯವಿದೆ ಎನ್ನಲಾಗಿದೆ. ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಿಸಿ ರುವ ಡಿವೈಡರ್ ಕಥೆ ಏನು? ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಹಾಗೂ ರಸ್ತೆಗಳ ಅಗ ಲೀಕರಣ ಕುರಿತಂತೆಯೂ ಸ್ಥಳೀಯ ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ನಗರಸಭೆ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಚಳ್ಳಕೆರೆಗೇಟ್‌ನಿಂದ ಪ್ರವಾಸಿ ಮಂದಿರ ವೃತ್ತ, ಗಾಂಧಿ ವೃತ್ತ, ಕನಕ ವೃತ್ತದವರೆಗೆ ರಸ್ತೆ ಅಗಲೀಕರಣ ಕುರಿತಂತೆ ಕಂದಾಯ ಸಚಿವರ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಸ್ತಾಪಿಸಿದ್ದರು. ಕಿರಿದಾದ ರಸ್ತೆಗಳು, ಜನ ಸಂಖ್ಯೆ, ಟ್ರಾಫಿಕ್ ಸಮಸ್ಯೆ ನಿವಾರಿಸಲು ಪ್ರಮುಖ ರಸ್ತೆಗಳ ಅಗಲೀಕರಣವಾಗಬೇಕಿದೆ. ಇದಕ್ಕಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿ ದೆ ಎಂದು ಡಿಸಿ, ಕಂದಾಯ ಸಚಿವರಿಗೆ ಮಾಹಿತಿ ಕೊಟ್ಟಿದ್ದರು.

ಹೊಸ ಡಿಸಿ ಕಟ್ಟಡ ಹಿಂದಿನ ಬಿಜೆಪಿ ಸರ್ಕಾರದ ತರಾತುರಿಯ ಹಾಗೂ ಅವೈಜ್ಞಾನಿಕ ನಿರ್ಧಾರವಾಗಿದೆ ಎಂದಿದ್ದ ಸಚಿವ ಸುಧಾಕರ್ 2022 ಮೇನಲ್ಲಿ ಕಾಮಗಾರಿ ಆರಂಭವಾಗಿದ್ದ ಈ ಕಟ್ಟಡ ಪೂರ್ಣಗೊಳಿಸಲು, ಕಂದಾಯ ಸಚಿವರ ಗಮನ ಸೆಳೆಯುವುದಾಗಿ ಹೇಳಿದ್ದರು. ಅದರಂತೆ ಕೃಷ್ಣಬೈರೇಗೌಡ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಆದರೆ ಈಗ ಕಟ್ಟಡವನ್ನು ಕಾಲೇಜಿಗೆ ಹಸ್ತಾಂತರಿಸುವ ಮಾತು ಕೇಳಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಭೆ ಹಿನ್ನೆಲೆಯಲ್ಲಿ ಡಿಸಿ ಬುಧವಾರ ಸಭೆ ನಡೆಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಡಿಸಿ ಕಚೇರಿ ಹೊಸ ಕಟ್ಟಡ ಹಸ್ತಾಂತರಕ್ಕೆ ಪ್ರಸ್ತಾವನೆಗೂ ಸೂಚಿಸಿದ್ದಾರೆಂದು ಗೊತ್ತಾಗಿದೆ.

----

ಕೋಟ್

ಚಿತ್ರದುರ್ಗ ನಗರದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧಪಡಿಸಲು ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ. ರಸ್ತೆ , ಡ್ರೈ ನೇಜ್ ನಿರ್ಮಾಣ, ವಿದ್ಯುತ್ ಕಂಬ ಸ್ಥಳಾಂತರ ಇತ್ಯಾದಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು.

ಎಂ.ರೇಣುಕಾ,ಆಯುಕ್ತರು, ನಗರಸಭೆ,ಚಿತ್ರದುರ್ಗ

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net