

ಗೊಳಸಂಗಿ: ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ್ ಅವರು ಸೋಮವಾರ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದರು.
ಸ್ಥಳೀಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪಿಆರ್‌ಡಿ ಮತ್ತು ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಕಟ್ಟಡದ ಮುಂಭಾಗದಲ್ಲಿ ಪಾರ್ಕಿಂಗ್ ಮತ್ತು ಸಿಸಿರಸ್ತೆ ನಿರ್ಮಿಸುವಂತೆ ಪಿಆರ್‌ಡಿ ಅಧಿಕಾರಿಗಳಿಗೆ ಸೂಚಿಸಿದರು. ನಂತರ ನರೇಗಾದಡಿ ಅನುಷ್ಠಾಣಗೊಂಡ ಹೈಟೆಕ್ ಶೌಚಗೃಹ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್. ಹಿರೇಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಅಭಿಯಂತರ ವಿ.ಬಿ. ಗೊಂಗಡಿ, ತಾಪಂ ಸಹಾಯಕ ನಿರ್ದೇಶಕ ಎಸ್.ಜೆ. ಉದಯಕುಮಾರ, ಆರ್‌ಎಫ್‌ಒ ಬಸವನಗೌಡ ಬಿರಾದಾರ, ಡಿಆರ್‌ಎಫ್‌ಒ ಬಸವರಾಜ ಕಣ್ಣೂರ, ತಾಂತ್ರಿಕ ಸಂಯೋಜಕ ಶಿವಾನಂದ ಹಂಚಿನಾಳ, ಟಿಐಇಸಿ ದಸ್ತಗೀರ ಗುಡಿಹಾಳ, ಪಿಡಿಒ ಮಲ್ಲಿಕಾರ್ಜುನ ಹಾವರಗಿ, ವೈದ್ಯಾಧಿಕಾರಿ ಡಾ. ಪ್ರಕಾಶ ಗೊಟ್ಕಂಡಕಿ, ಗ್ರಾಪಂ ಅಧ್ಯಕ್ಷ ಕೇಶವ ಪವಾರ ಮತ್ತಿತರರು ಇದ್ದರು.