ಜಿರಲೆ ಬಿದ್ದಿದ್ದ ಹಾಲು ಸೇವಿಸಿ ಮಕ್ಕಳು ಅಸ್ವಸ್ಥ

26-08-Shiva-1
ಜಿರಲೆ ಬಿದ್ದ ಹಾಲು ಕುಡಿದು ಅಸ್ವಸ್ಥಗೊಂಡ ರಾಯಚೂರು ತಾಲೂಕಿನ ತಲಮಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಶುಕ್ರವಾರ ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆಗೆ ಕರೆತಂದಿರುವುದು.
Published on

ರಾಯಚೂರು: ಜಿರಲೆ ಬಿದ್ದ ಹಾಲು ಸೇವಿಸಿ 20ಕ್ಕೂ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ತಲಮಾರಿ ಗ್ರಾಮ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಜರುಗಿದ್ದು, ಅಸ್ವಸ್ಥಗೊಂಡ ಮಕ್ಕಳಿಗೆ ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಹಾಲು ಕುಡಿದ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದು ಕಂಡು ಬಂದ ಕಾರಣ ವಿದ್ಯಾರ್ಥಿಗಳನ್ನು ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಉಳಿದ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಹಾಲಿಪುಡಿ ಪಾಕೇಟ್‌ನಲ್ಲಿ ಜಿರಲೆ ಬಂದಿದೆಯೋ ಅಥವಾ ಪುಡಿ ಕಲಿಸಲಾದ ಪಾತ್ರೆಯಲ್ಲಿ ಜಿರಲೆ ಬಂದಿದೆಯೋ ಎನ್ನುವುದು ತಿಳಿದು ಬಂದಿಲ್ಲ. ಮಕ್ಕಳು ಅಸ್ವಸ್ಥಗೊಂಡ ನಂತರ ಹಾಲು ಪರಿಶೀಲನೆ ಮಾಡಿದಾಗ ಸತ್ತ ಜಿರಲೆಗಳು ಕಂಡು ಬಂದಿವೆ.
ವಿಷಯ ತಿಳಿದು ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಶಾಲೆ ಮತ್ತು ಇಡಪನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿ, ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net