ಜಿಮ್‌ನಲ್ಲಿ ಕಸರತ್ತು ,ನಾಲ್ವರ ವಿರುದ್ಧ್ದ ಪ್ರಕರಣ ದಾಖಲು

GYM 12 march 20
ಸಾಂದರ್ಭಿಕ ಚಿತ್ರ
Published on

ಉಡುಪಿ: ಕೋವಿಡ್19 ಹರಡುವಿಕೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಜಿಮ್‌ನ್ನು ತೆರೆಯಬಾರದು ಎಂಬ ಆದೇಶ ಹೊರಡಿಸಿದ್ದರೂ, ನಿಯಮ ಉಲ್ಲಂಘಿಸಿ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಜಿಮ್‌ಗೆ ದಾಳಿ ನಡೆಸಿ ನಾಲ್ವರ ವಿರುದ್ಧ ದಾಖಲಿಸಿದ್ದಾರೆ. ಬಡಗುಬೆಟ್ಟು, ಮಿಷನ್‌ಕಾಂಪೌಂಡ್ ನಿವಾಸಿ ಜುನೈದ್ (20), ಚಿಟ್ಪಾಡಿ ಕಸ್ತೂರ್ಬಾ ನಗರ ನಿವಾಸಿ ಯತೀನ್ ಪೂಜಾರಿ (26), ಆದಿ ಉಡುಪಿ ನಿವಾಸಿಗಳಾದ ಋಷಿಕೇಶ್ (21), ಸಂಗನಗೌಡ (20 ) ಆರೋಪಿಗಳು. ನಗರದ ಪರಿವಾರ್ ಸ್ವೀಟ್ಸ್ ಬಳಿಯ ಶಂಕರ್ ಶೇಟ್ ಬಿಲ್ಡಿಂಗ್‌ನಲ್ಲಿರುವ ಆಕ್ಸಿ ಜಿಮ್ನಲ್ಲಿ ಆರೋಪಿಗಳು ಸರ್ಕಾರದ ಆದೇಶ ಉಲ್ಲಂಘಿಸಿ ಜಿಮ್ ಮಾಡುತ್ತಿದ್ದರು.

ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್‌ಗಳನ್ನು ಉಪಯೋಗಿಸದೇ ಕರೊನಾ ವೈರಸ್ ತಡೆಗಟ್ಟುವಲ್ಲಿ ನಿರ್ಲಕ್ಷೃ ವಹಿಸಿದ್ದಾರೆ ಎಂದು ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net