ಜಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವು

Crime Logo
Published on

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷÈದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಶೇಖ್ ರೋಜಾ ಆಶ್ರಯ ಕಾಲನಿಯ ಗಂಗುಬಾಯಿ ಮೃತ ಮಹಿಳೆ. ಜೂ.೧೫ರಂದು ರಾತ್ರಿ ಗಂಗುಬಾಯಿ ಅವರಿಗೆ ಹೊಟ್ಟೆ ನೋವು ಆರಂಭವಾಗಿದ್ದು, ಪುತ್ರನು ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲ, ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ವೈದ್ಯೆಯೊಬ್ಬರು ಆಗಮಿಸಿ ಲೋ ಬಿಪಿ ಆಗಿದೆ ಎಂದು ಹೇಳಿ ಹೋಗಿದ್ದಾರೆ. ರಾತ್ರಿ ೨.೩೦ ಗಂಟೆ ವೇಳೆಗೆ ನಿಮ್ಮ ತಾಯಿ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ವೈದ್ಯರ ನಿರ್ಲಕ್ಷÈದಿಂದ ನಮ್ಮ ತಾಯಿ ನಿಧನ ಹೊಂದಿದ್ದು, ಆಸ್ಪತ್ರೆ ವೈದ್ಯರು ಮತ್ತು ನಿರ್ದೇಶಕ ಡಾ.ಉಮೇಶ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಮಹಿಳೆ ಪುತ್ರ ಸಂತೋಷ ಜಮಾದಾರ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net