ಜಿಮ್ಸ್ ಆವರಣದಲ್ಲಿ ಆಟೋ ಕಳ್ಳತನ

Crime Logo
Published on

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ ಆಟೋವನ್ನು ಕಳ್ಳತನ ಮಾಡಿದ ಘಟನೆ ಸೋಮವಾರ ಬೆಳಗ್ಗೆ ೧೧ರ ಸುಮಾರಿಗೆ ನಡೆದಿದೆ. ನಾಗನಹಳ್ಳಿ ರಸ್ತೆಯ ಜಮಶೆಟ್ಟಿ ನಗರದ ಬಸವರಾಜ ಶಿಂಪಿ ಆಟೋ ಕಳೆದುಕೊಂಡವರು. ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಹೋದರನನ್ನು ಮಾತನಾಡಿಸಲು ಸೋಮವಾರ ಆಸ್ಪತ್ರೆಗೆ ಬಂದಿದ್ದು, ಆವರಣದಲ್ಲಿ ಆಟೋ ನಿಲ್ಲಿಸಿ, ಮಾತನಾಡಲು ಹೋಗಿದ್ದಾರೆ. ಆರೋಗ್ಯ ವಿಚಾರಿಸಿ ಹೊರಗೆ ಬಂದಾಗ ಆಟೋ ಇರಲಿಲ್ಲ. ವಿವಿಧೆಡೆ ಹುಡುಕಾಡಿದರೂ ಆಟೋ ಸಿಕ್ಕಿಲ್ಲ. ಹುಡುಕಿ ಕೊಡಿ ಎಂದು ಬ್ರಹ್ಮಪುರ ಪೊಲೀಸ್ ಠಾಣೆಗೆ ಬಸವರಾಜ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net