ಜಿಮ್ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆ

19 Dwd 1
Published on

ಧಾರವಾಡ: ಜಿಮ್ ಆರಂಭಕ್ಕೆ ಆಗ್ರಹಿಸಿ ಧಾರವಾಡ ಜಿಮ್ ಹಾಗೂ ಫಿಟ್​ನೆಸ್ ಸೆಂಟರ್​ಗಳ ಮಾಲೀಕರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಮ್ ಮಾಲೀಕರು ಹಾಗೂ ತರಬೇತುದಾರರು ಜಿಮ್ ಪರಿಕರಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ನಂತರ ಕೆಲಕಾಲ ತಾಲೀಮು ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕರೊನಾ ಲಾಕ್​ಡೌನ್​ನಿಂದ ಜಿಮ್ಳನ್ನು ತೆರೆಯಲು ಅವಕಾಶ ನೀಡಿಲ್ಲ. ಇದರಿಂದ ನಷ್ಟವಾಗಿದ್ದು, ಮತ್ತೊಂದೆಡೆ ಯುವಕರು ಕಸರತ್ತು ಮಾಡುವುದರಿಂದ ವಂಚಿತರಾಗುತ್ತಿದ್ದಾರೆ. ಲಾಕ್​ಡೌನ್ ಸಡಿಲಿಕೆಯಾಗಿದ್ದರೂ ಜಿಮ್ಳನ್ನು ತೆರೆಯಲು ಏಕೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಷರತ್ತು ವಿಧಿಸಿ ಕೂಡಲೆ ಜಿಮ್ಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಸವರಾಜ ಜಾಧವ, ಅನುಷ ದೇಸಾಯಿ, ಮಹ್ಮದ ಗೌಸ್, ಶಾನು ನದಾಫ್, ಖಲಂದರ ಜಹಗೀರದಾರ, ರಾಜು ಚಲವಾದಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net