ಜಿಪಿಎಲ್ ಕ್ರಿಕೆಟ್ ಟೂರ್ನಿಗೆ ಆಟಗಾರರ ಹರಾಜು

28 gkp 05
Published on

ಗೋಣಿಕೊಪ್ಪ: ಜಿಪಿಎಲ್ ಸಂಘಟನೆ ವತಿಯಿಂದ ಮಾರ್ಚ್ ತಿಂಗಳಲ್ಲಿ ಆಯೋಜಿಸಿರುವ ಗೋಣಿಕೊಪ್ಪ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ಕಕೂನ್ ಸಭಾಂಗಣದಲ್ಲಿ ನಡೆಯಿತು.

120ಕ್ಕೂ ಹೆಚ್ಚು ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾದರು. ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಹೆಸರಿನಲ್ಲಿ ತಂಡಗಳಿಗೆ ಆಟಗಾರರನ್ನು ಖರೀದಿಸಲಾಯಿತು. ಆರ್.ಸಿ.ಬಿ. ತಂಡದ ಮಾಲೀಕ ಮುಕ್ತಾರ್ ಬೇಗ್, ಸಿ.ಎಸ್.ಕೆ ತಂಡದ ಶರತ್‌ಕಾಂತ್, ಕೆ.ಕೆ.ಆರ್.ತಂಡದ ಎ.ವೈ.ಸಿ., ಅರುವತ್ತೊಕ್ಲು, ಆರ್.ಆರ್.ತಂಡದ ಕಂದಾಸ್ವಾಮಿ-ಕವಿ ಸುಬ್ಬಯ್ಯ, ಪಂಜಾಬ್ ಕಿಂಗ್ಸ್ ತಂಡದ ಅವಿನಾಶ್-ಪ್ರಶಾಂತ್, ಡೆಲ್ಲಿ ಕ್ಯಾಪಿಟಲ್ ತಂಡದ ಶಶಿ-ವಿನಯ್, ಮುಂಬೈ ಇಂಡಿಯನ್ಸ್ ತಂಡದ ಕಿರಣ್, ಗುಜರಾತ್ ಟೈಟನ್ಸ್ ತಂಡದ ರಾಘವೇಂದ್ರ, ಲಕ್ನೌ ಗೈಟ್ಸ್ ತಂಡದ ರಾಘವೇಂದ್ರ-ದಿಲೀಪ್, ಸನ್‌ರೈಸರ್ಸ್‌ ಹೈದರಬಾದ್ ತಂಡದ ಗಗನ್ ಖರೀದಿಸಿದರು.

ಲಾಂಛನವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯಾ ಬಾಲು ಅನಾವರಣಗೊಳಿಸಿದರು. ಮಾರ್ಚ್ 16, 17, 18 ಮತ್ತು 19 ರಂದು ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಟೂರ್ನಿ ನಡೆಸಲಾಗುವುದು ಎಂದು ಪ್ರಕಟಿಸಲಾಯಿತು.

ಜಿಪಿಎಲ್ ಸಂಘಟನೆ ಅಧ್ಯಕ್ಷ ಸಾಜಿ, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್, ಉದ್ಯಮಿ ತೃತಿಕ್, ಮುಕ್ತಾರ್, ವಕೀಲ ಪ್ರದೀಪ್, ಸ್ಥಾಪಕ ಅಧ್ಯಕ್ಷ ಶರ್ಫೂದ್ದೀನ್, ಕ್ರೀಡಾ ಸಂಚಾಲಕ ಸಿಂಗಿ ಸತೀಶ್, ಕಾರ್ಯದರ್ಶಿ ಶಮ್ಮು, ಉಪಾಧ್ಯಕ್ಷ ಅಣ್ಣಪ್ಪ, ಖಜಾಂಚಿ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net