ಜಿಪಂ, ತಾಪಂ ಚುನಾವಣೆಗೆ ಸನ್ನದ್ಧರಾಗಿ

ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಘಟಕ ಅಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಭಾನುವಾರ ನಡೆಯಿತು. ಅಬ್ರಾಹರ್, ಅಬ್ದುಲ್ ಅಡ್ಕರ್, ಬಶೀರ್, ಕೆ.ಎ. ಉಸ್ಮಾನ್ ಇತರರಿದ್ದರು.
24sunti01
Published on

ಸುಂಟಿಕೊಪ್ಪ: ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಸುಂಟಿಕೊಪ್ಪದ ಪಕ್ಷದ ಕಚೇರಿಯಲ್ಲಿ ಚುನಾವಣಾ ಪೂರ್ವಭಾವಿ ಸಭೆ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಬ್ದುಲ್ ಮಜೀದ್ ಅವರ ನೇತೃತ್ವದಲ್ಲಿ ಭಾನುವಾರ ಸಂಜೆ ನಡೆಯಿತು.


ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಂದಿನ ದಿನಗಳಲ್ಲಿ ನಡೆಯಲ್ಲಿದ್ದು ಪಕ್ಷದ ಕಾರ್ಯಕರ್ತರು ಚುನಾವಣೆಗೆ ಸನ್ನದ್ಧರಾಗಬೇಕು. ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸುವ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕೆಂದು ಅಬ್ದಲ್ ಮಜೀದ್ ಕರೆ ನೀಡಿದರು.


ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎರಡನೇ ಹಂತದ ಆಯ್ಕೆ ಪ್ರಕ್ರಿಯೆಗೆ ನಮ್ಮ ಪಕ್ಷದವರು ಸ್ಪರ್ಧೆಗೆ ಇಳಿಯಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲವನ್ನು ಪಡೆದು ಅಧಿಕಾರ ನಡೆಸಲು ಒಮ್ಮತದಿಂದ ಸನ್ನದ್ಧರಾಗಲು ಸಭೆಯಲ್ಲಿ ನಿರ್ಧರಿಸಲಾಯಿತು.


ಕಳೆದ ಎರಡು ಅವಧಿಯಲ್ಲೂ ಕಾಂಗ್ರೆಸ್-ಜೆಡಿಎಸ್‌ಗೆ ಬೆಂಬಲ ನೀಡುತ್ತಾ ಬರುತ್ತಿದ್ದು, ಈ ಬಾರಿ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲ ಪಡೆದು ಅಧಿಕಾರಿ ಹಿಡಿಯಲು ಪ್ರಯತ್ನಿಸಲು ಸಭೆಯಲ್ಲಿ ಚರ್ಚಿಸಲಾಯಿತು.


ರಾಜ್ಯ ನಾಯಕ ಅಬ್ರಾಹರ್, ಕೊಡಗು ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಕಾರ್ಯದರ್ಶಿ ಬಶೀರ್, ಪಂಚಾಯಿತಿ ಸದಸ್ಯೆ ನಾಗರತ್ನಾ, ಮನ್ಸೂರ್, ಕೆ.ಎ.ಉಸ್ಮಾನ್, ನಗರಾಧ್ಯಕ್ಷ ಬಾಶಿತ್, ಹಾಗೂ ಕೆ.ಎ.ಲತೀಫ್, ಪಂಚಾಯಿತಿ ಸದಸ್ಯರಾದ ಹಸೀನಾ, ಮಂಗಳಮ್ಮ ಹಾಗೂ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net