

ಬಾಗಲಕೋಟೆ: ಎಎಪಿ ಪಕ್ಷವು ಪಂಜಾಬ, ದೆಹಲಿಯಲ್ಲಿ ಉತ್ತಮ ಆಡಳಿತ ನಡೆಸಿದೆ. ಕರ್ನಾಟಕದಲ್ಲಿಯೂ ಮಾದರಿ ಸರ್ಕಾರ ನೀಡಬೇಕು ಎನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಕಣಕ್ಕೆ ಇಳಿಸಲಾಗುವುದು ಎಂದು ಎಎಪಿ ವಕ್ತಾರ ಜಗದೀಶ ಕದಂ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಎಪಿ ರಾಜ್ಯದಲ್ಲಿ ಸಂಘಟಿಸುವ ನಿಟ್ಟಿನಲ್ಲಿ ಹೊಸ ಪದಾಽಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿಯೂ ಇನ್ನಷ್ಟು ಬಲಗೊಳ್ಳಲು ಹೊಸ ಪ್ರಯತ್ನ, ಹೋರಾಟ ನೆಡೆಸಲಾಗುವುದು ಎಂದರು.
ರಾಜ್ಯ ಅಧ್ಯಕ್ಷ ಸೀತಾರಂ ಗುಂಡಪ್ಪ ಮಾತನಾಡಿ, ರಾಜ್ಯದಲ್ಲಿ ಆಪ್ ಪಕ್ಷ ಬದಲಾವಣೆ ತರುವ ನಿಟ್ಟಿನಲ್ಲಿ ರಾಜ್ಯದ್ಯಂತ ಸಂಘಟನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ ಇವೆ. ಮುಖ್ಯವಾಗಿ ಜಿ¯್ಲÁ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪೂರ ಹಗರಣದಲ್ಲಿ ಮುಳಗಿ ಹೋಗಿದ್ದಾರೆ. ಅವರನ್ನು ಸಂಪುಟದಿAದ ವಜಾಗೊಳಿಸುವಂತೆ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಅರ್ಜುನ ಹಲಗಿಗೌಡರ, - ಆನಂದ ದೇವಾಡಿಗ, ರವಿಕುಮಾರ ಇತರರು ಇದ್ದರು. '