

ಕಲಬುರಗಿ: ಜೆಡಿಎಸ್ ಪಕ್ಷದ ಆಡಳಿತದಲ್ಲಿನ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯನ್ನು ಎದುರಿಸಲು ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಕೆಲಸ ನಿರ್ವಹಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಹೇಳಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಅಧ್ಯಕ್ಷ ಎಚ್‌ಡಿ ದೇವೆಗೌಡರು, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದಲ್ಲಿ ಜಾರಿ ಮಾಡಿದ ಸಾಲಮನ್ನಾ, ಗ್ರಾಮ ವಾಸ್ತವ್ಯ, ನೀರಾವರಿ ಯೋಜನೆ ಸೇರಿ ಇತರ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ, ಕಾರ್ಖಾನೆಗಳಲ್ಲಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಆಗ್ರಹಿಸಿ ಪಕ್ಷದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಚುನಾವಣೆ, ಜೆಡಿಎಸ್ ಸದ್ಯಸತ್ವ ನೋಂದಣಿ ಅಭಿಯಾನ, ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಮತಗಳು, ಪಕ್ಷದ ಸಂಘಟನೆ ಕುರಿತು ಚರ್ಚಿಸಲಾಯಿತು.
ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮುಖಂಡರಾದ ಕೃಷ್ಣಾರೆಡ್ಡಿ, ಸಂಜೀವನ ಯಾಕಾಪುರ, ನಾಸಿರ್ ಹುಸೇನ್ ಉಸ್ತಾದ್, ವಿಶ್ವನಾಥ ನಾಡಗೌಡ, ಹಣಮಂತ ಸನಗುಂದಿ, ಹಣಮಂತ ಕಂದಹಳ್ಳಿ, ಸಿದ್ದಣ್ಣ ಪಾಟೀಲ್, ಸುನೀಲ್ ಗಾಜರೆ, ಸಂಜು ಮಡಕಿ, ಪ್ರವೀಣ ಜಾಧವ್, ಯೇಶುನಾಥ, ಭೀಮರಾಯ ಜನಿವಾರ, ಜಮೀಲ್ ಗೌಂಡಿ, ಕಲೀಂ ಬಾಂಡ್, ರವಿಶಂಕರ್ ರೆಡ್ಡಿ, ಪಾರ್ವತಿ ಪುರಾಣಿಕ್ ಇತರರಿದ್ದರು.