

ಚಿತ್ರದುರ್ಗ:ಅನಧಿಕೃತ ಗೈರು ಹಾಜರಿ ಹಿನ್ನೆಲೆಯಲ್ಲಿ ಜಿಪಂ ದ್ವಿತೀಯ ದರ್ಜೆ ಸಹಾಯಕ ನೌಕರರೊಬ್ಬರನ್ನು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಹೇಳದೆ ಕೇಳದೇ, ಸೂಕ್ತ ಅನುಮತಿ ಇಲ್ಲದೆ ಗೈರು ಹಾಜರಾಗುತ್ತಿರುವ ಜಿಪಂ ಅಭಿವೃದ್ಧಿ ಶಾಖೆ ಎಸ್‌ಡಿಎ ಸಿ.ಎನ್.ನವನೀತ್ ಅವರನ್ನು ಮುಂದಿನ ತನಿಖೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ. ಪದೆ,ಪದೇ ಗೈರು ಹಾಜರಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದರೂ ತಮ್ಮ ನಡವಳಿಕೆ ಬದಲಾಯಿಸಿಕೊಳ್ಳದ ಈ ನೌಕರನ ವಿರುದ್ಧ ಸಿಇಒ ಈ ಶಿಸ್ತು ಕ್ರಮ ಜರುಗಿಸಿದ್ದಾರೆ.