ಜಿನ್ನಪ್ಪಣ್ಣಾ ಚೌಗುಲೆ ಸಹಕಾರಿಗೆ ೧.೮೫ ಕೋಟಿ ರೂ. ಗಳಿಕೆ

12KAGWAD3
Published on

ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ೨೦೨೪-೨೫ ಆರ್ಥಿಕ ವರ್ಷದ ಕೊನೆಯಲ್ಲಿ ೧,೮೫,೨೪,೯೪೪ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಭಮ್ಮಣ್ಣಾ ಚೌಗುಲೆ ತಿಳಿಸಿದ್ದಾರೆ.

ಗ್ರಾಮದ ಸಹಕಾರಿಯ ಮುಖ್ಯ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಆರ್ಥಿಕ ವರ್ಷದ ಕೊನೆಗೆ ಮಾರ್ಚ್ ೩೧ಕ್ಕೆ ಒಟ್ಟು ೩,೫೨೨ ಸದಸ್ಯರಿದ್ದು, ೧೮.೫೮ ಲಕ್ಷ ರೂ. ಷೇರು ಬಂಡವಾಳ, ೧೪,೦೦,೨೮,೯೫೪ ರೂ. ಕಾಯ್ದಿಟ್ಟ ಮತ್ತು ಇತರ ನಿಧಿ, ೧೨೮ ಕೋಟಿ ೪೩ ಸಾವಿರದ ೯೭೦ ರೂ. ಠೇವಣಿ ಸಂಗ್ರಹಿಸಲಾಗಿದೆ. ಇನ್ನೂ ೬೩,೩೭,೭೯,೩೧೦ ರೂ. ಸಾಲ ವಿತರಿಸಿದ್ದು, ೧೦,೮೩,೮೬, ೪೨೧ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿದೆ. ೭೦,೩೯,೯೪,೧೮೮ ರೂ. ಹೂಡಿಕೆ ಮಾಡಲಾಗಿದ್ದು, ೧೪೪ ಕೋಟಿ ೪ ಲಕ್ಷ ೫೫ ಸಾವಿರದ ೮೬೮ ರೂ. ದುಡಿಯುವ ಬಂಡವಾಳ ಹೊಂದಿದ್ದು, ಸಹಕಾರಿಯು ಒಟ್ಟು ೯ ಶಾಖೆ ಹೊಂದಿದೆ ಎಂದು ತಿಳಿಸಿದರು.

ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಮಹಾವೀರ ಕಾತ್ರಾಳೆ ಸೇರಿದಂತೆ ಸಹಕಾರಿಯ ಉಪಾಧ್ಯಕ್ಷರು, ಸದಸ್ಯರು, ಸಹಕಾರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net