ಜಿನದತ್ತ ದೇಸಾಯಿ, ಡಾ. ಚೆನ್ನಿಗೆ ಅಂಬಿಕಾತನದತ್ತ ರಾಷ್ಟ್ರೀಯ ಪ್ರಶಸ್ತಿ

20230124_144814
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡದ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ. 31ರಂದು ವರಕವಿ ಡಾ. ದ.ರಾ. ಬೇಂದ್ರೆ ಅವರ 127ನೇ ಜನ್ಮದಿನದ ಅಂಗವಾಗಿ ನೀಡಲಾಗುವ ‘ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ನಿವತ್ತ ನ್ಯಾಯಾಧೀಶ, ಬೆಳಗಾವಿಯ ಕವಿ ಡಾ. ಜಿನದತ್ತ ದೇಸಾಯಿ ಹಾಗೂ ಹಿರಿಯ ವಿಮರ್ಶಕ ಶಿವಮೊಗ್ಗದ ಡಾ. ರಾಜೇಂದ್ರ ಚೆನ್ನಿ ಭಾಜನರಾಗಿದ್ದಾರೆ. ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಅಂದು ಸಂಜೆ 4.30ಕ್ಕೆ ಬೇಂದ್ರೆ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಪ್ರಶಸ್ತಿ ಪ್ರದಾನ ಮಾಡುವರು. ಶಿರಸಿಯ ಪ್ರೊ. ಎಚ್.ಆರ್. ಅಮರನಾಥ ಅವರು ಸಂಪಾದಿಸಿರುವ ‘ಪ್ರೊ. ಬೇಂದ್ರ ಮಾಸ್ತರರ ಅಮರವಾಣಿ’ ಕೈಪಿಡಿಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net