ಜಿತಾಮಿತ್ರತೀರ್ಥರ ಸಂಭ್ರಮದ ಮಧ್ಯಾರಾಧನೆ

11ydg02
Published on


ಯಾದಗಿರಿ: ರುದ್ರಾಂಶ ಸಂಭೂತರಾದ ಶ್ರೀ ಜಿತಾಮಿತ್ರತೀರ್ಥರ 532ನೇ ಮಧ್ಯಾರಾಧನೆ ಮಹೋತ್ಸವ ವಡಿಗೇರಾ ತಾಲೂಕಿನ ಶಿವಪುರ ಸಮೀಪದ ಕೃಷ್ಣಾ, ಭೀಮಾ ಪವಿತ್ರ ಸಂಗಮ ಸ್ಥಳವಾದ ಜಿತಾಮಿತ್ರರ ಗಡ್ಡೆಯಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು.


ಆರಾಧನೆ ನಿಮಿತ್ತ ಗಡ್ಡೆಗೆ ಯಾದಗಿರಿ ಸೇರಿದಂತೆ ರಾಯಚೂರು, ಕಲಬುರಗಿ ಜಿಲ್ಲೆಗಳಿಂದ ಅಸಂಖ್ಯ ಭಕ್ತರು ಆಗಮಿಸಿದ್ದರು. ಮಧ್ಯಾರಾಧನೆ ನಿಮಿತ್ತ ಮಂತ್ರಾಯಲದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ ಹಾಗೂ ಕನಕಾಭಿಷೇಕ ನಡೆಯಿತು. ವಿಶೇಷ ಧಾಮರ್ಿಕ ಕಾರ್ಯಕ್ರಮಗಳ ನಂತರ ಶ್ರೀಗಳು ಭಕ್ತರಿಗೆ ಹಿತೋಪದೇಶ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net