ಜಿಡಗಾ ಶ್ರೀಗಳ ಪಾದಯಾತ್ರೆ ಸೋಮವಾರ

PH 10
Published on

ಕಲಬುರಗಿ: ಲೋಕ ಕಲ್ಯಾಣಾರ್ಥವಾಗಿ ಜಿಡಗಾ, ಮುಗಳಖೋಡ ಮಠದ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮಿಗಳು ಸೋಮವಾರ ಬೆಳಗ್ಗೆ 6ಕ್ಕೆ ಕೋಟನೂರು ಮಠದಿಂದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ಮಹಾ ಪಾದಯಾತ್ರೆ ನಡೆಸಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ.

ಬೆಳಗ್ಗೆ 6ಕ್ಕೆ ಕೋಟನೂರು ಮಠದಿಂದ `ಶಿವಯೋಗಿ ಶ್ರಾವಣ ಪಾದಯಾತ್ರೆ' ಆರಂಭವಾಗಲಿದ್ದು, ಹಳೇ ಜೇವರ್ಗಿ ರಸ್ತೆ, ತಿಮ್ಮಾಪುರಿ, ಕೋರ್ಟ್ ರಸ್ತೆಯ ಮೂಲಕ ಶ್ರೀ ಶರಣಬಸವೇಶ್ವರ ದೇವಸ್ಥಾನ ತಲುಪಲಿದೆ. ಶ್ರೀಗಳೊಂದಿಗೆ ಅಪಾರ ಭಕ್ತರು ಹೆಜ್ಜೆ ಹಾಕಲಿದ್ದಾರೆ. ಬಳಿಕ 11ಕ್ಕೆ ಸಿದ್ಧಶ್ರೀ ಡಿವೈನ್ ಪ್ಯಾಲೇಸ್‌ನಲ್ಲಿ ಶ್ರೀಗಳಿಗೆ ಶ್ರಾವಣ ಬಿಲ್ವ ಪಾದಪೂಜೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net