ಜಿಟಿಟಿಸಿ ಪ್ರವೇಶಕ್ಕೆ ಅರ್ಜಿ ಆಹ್ವಾನ

oppo_2
oppo_2
Published on

ಕಲಬುರಗಿ: ಕೈಗಾರಿಕೆಗಳಲ್ಲಿ ಉದ್ಯೋಗಕ್ಕೆ ಪೂರಕ ಉಪರಕಣ, ಬಿಡಿಭಾಗಗಳ ತಯಾರಿಕೆ, ಸಣ್ಣ ಕೈಗಾರಿಕೆಗಳಿಗೆ ತಂತ್ರಜ್ಞಾನ ತರಬೇತಿ ನೀಡಲು ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂದು ಪ್ರಾಂಶುಪಾಲೆ ಸುಧಾರಾಣಿ ಅಟ್ಟೂರ ತಿಳಿಸಿದರು.
ಸಂಸ್ಥೆಯಲ್ಲಿ ನಾಲ್ಕು ವರ್ಷದ ಕೋರ್ಸ್ಗಳಾದ ಡಿಪ್ಲೋಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್, ಡಿಪ್ಲೋಮಾ ಇನ್ ಇಲೆಕ್ಟಿçಕಲ್ ಆ್ಯಂಡ್ ಇಲೆಕ್ಟಾçನಿಕ್ಸ್ ಇಂಜಿನಿಯರಿAಗ್, ಡಿಪ್ಲೋಮಾ ಇನ್ ಮೆಕಟ್ರಾನಿಕ್ಸ್ ಕೋರ್ಸ್ಗಳಿದ್ದು, ಪ್ರತಿ ಕೋರ್ಸ್ಗೆ ೬೦ ಸೀಟ್‌ಗಳಿವೆ. ಪ್ರವೇಶ ಆರಂಭವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾಲ್ಕು ವರ್ಷದ ಕೋರ್ಸ್ನಲ್ಲಿ ಮೂರು ವರ್ಷ ಶೇ.೬೦ ಪ್ರಾಯೋಗಿಕ, ಶೇ.೪೦ ಥಿಯರಿ ಬೋಧನೆಯೊಂದಿಗೆ ಒಂದು ವರ್ಷ ಕೈಗಾರಿಕೆಗಳಲ್ಲಿ ವಿದ್ಯಾರ್ಥಿ ವೇತನ ಸಹಿತ ಇಂಟರ್ನ್ಶಿಫ್ ತರಬೇತಿ ನೀಡಲಾಗುತ್ತದೆ. ಇದರಿಂದ ಜಿಟಿಟಿಸಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಶೇ.೧೦೦ ಖಚಿತವಾಗಿ ಉದ್ಯೋಗ ದೊರೆಯಲಿದೆ ಎಂದು ಭರವಸೆ ನೀಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ ಅರ್ಜಿ ಆಹ್ವಾನಿಸಿದ್ದು, ಮೇ ೧೩ರಂದು ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೇ ೨೭ ಕೊನೇ ದಿನವಾಗಿದೆ. ವಿದ್ಯಾರ್ಥಿಗಳ ಮಾಹಿತಿಗೆ ಜಿಟಿಟಿಸಿ ಕಲಬುರಗಿ ಕೇಂದ್ರದಲ್ಲಿ ಹೆಲ್ಪ್ಲೈನ್ ಕೇಂದ್ರ ಆರಂಭಿಸಿದ್ದು, ಅಲ್ಲಿಗೆ ಬಂದರೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಉತ್ಪಾದನಾ ಕೇಂದ್ರ: ಜಿಟಿಟಿಸಿ ಕೇವಲ ತರಬೇತಿ ನೀಡುವುದಷ್ಟೇ ಅಲ್ಲ ಜಿಲ್ಲೆಯಲ್ಲಿನ ಸಿಮೆಂಟ್ ಕಾರ್ಖಾನೆಗಳಿಗೆ, ಆಸ್ಪತ್ರೆಗಳಿಗೆ ಹಲವು ಉಪಕರಣಗಳನ್ನು ಸಿದ್ಧಪಡಿಸಿ, ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡುತ್ತಿದೆ. ಸಂಸ್ಥೆಗೆ ಅಲ್ಪಮಟ್ಟಿನ ಆದಾಯವನ್ನು ಈ ಮೂಲಕ ಪಡೆಯಲಾಗುತ್ತಿದೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ವಸತಿ ಶಾಲೆಯೂ ಇದೆ ಎಂದು ಸಂಸ್ಥೆಯ ಘಟಕ ಮುಖ್ಯಸ್ಥ ಜೈರಾಜ ನರಗುಂದ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net