

ಚಿತ್ರದುರ್ಗ:ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2025-26ನೇ ಸಾಲಿಗೆ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆ ಹ್ವಾನಿಸಲಾಗಿದೆ. ಡಿಪ್ಲೊಮಾ ಇನ್‌ಟೂಲ್ ಆ್ಯಂಡ್ ಡೈ ಮೇಕಿಂಗ್,ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್,ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿ ಕೇಷನ್ ಕೋರ್ಸ್‌ಗಳಿದ್ದು,ಇವುಗಳ ಅವಧಿ 3 ವರ್ಷ ಹಾಗೂ 1 ವರ್ಷ ಕೈಗಾರಿಕೆಗಳಿಗೆ ಕಡ್ಡಾಯ ನಿಯೋಜನೆ ಇರುತ್ತದೆ.
ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರು,ದ್ವೀತಿಯ ಪಿಯುಸಿ(ವಿಜ್ಞಾನ)ಹಾಗೂ ಐಟಿಐ ಉತ್ತೀರ್ಣ ವಿದ್ಯಾರ್ಥಿಗಳು ನೇರ ದ್ವೀತಿಯ ವರ್ಷದ ಡಿಪ್ಲೊಮಾಕ್ಕೆ ಮತ್ತು ಡಿಪ್ಲೊಮಾ ಉತ್ತೀರ್ಣರಾದವರು ನೇರ ದ್ವೀತಿಯ ವರ್ಷದ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆಯ ಬಹುದು. ಹೆಚ್ಚಿನ ಮಾಹಿತಿಗೆ ಕೇಂದ್ರವನ್ನು ಸಂಪರ್ಕಿಸುವಂತೆ ಜಿಟಿಟಿಸಿ ಪ್ರಾಚಾರ‌್ಯ ಬಿ.ಎಸ್.ಸುಹಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----