

ಗುಂಡ್ಲುಪೇಟೆ: ಯುವ ಜನತೆಯ ಉದ್ಯೋಗ ಹಾಗೂ ಸ್ವಾವಲಂಬನೆಗೆ ಪೂರಕವಾದ ಕಾಲೇಜಿನ ಅಭಿವದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಸರ್ಕಾರಿ ಯಂತ್ರೋಪಕರಣ ಹಾಗೂ ತರಬೇತಿ (ಜಿಟಿಟಿಸಿ) ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಆರಂಭವಾದಾಗಿನಿಂದಲೂ ತಾಲೂಕು ಹಾಗೂ ಸುತ್ತಲಿನ ಯುವ ಜನತೆಯ ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ಪೂರಕವಾದ ಕೋರ್ಸ್‌ಗಳನ್ನು ನಡೆಸಲಾಗುತ್ತಿದ್ದು, ಇಲ್ಲಿ ತರಬೇತಿ ಪಡೆದವರು ಬೇರೆ ಬೇರೆ ರಾಜ್ಯಗಳಲ್ಲಿಯೂ ಉದ್ಯಮ ನಡೆಸುತ್ತಿರುವ ಬಗ್ಗೆ ಹೆಮ್ಮೆಪಡುವಂತಾಗಿದೆ ಎಂದರು.
ಸ್ವಯಂಉದ್ಯೋಗ ವಿಭಾಗವನ್ನು ಅಭಿವೃದ್ಧಿಪಡಿಸುವ ಜತೆಗೆ ಕಾಲೇಜಿನಲ್ಲಿ ತರಬೇತಿ ಪಡೆದ ಯುವಕರಿಂದ ಒಂದು ಕಂಪನಿಯನ್ನು ಆರಂಭಿಸುವ ಬಗ್ಗೆ ಉಪನ್ಯಾಸಕರೊಂದಿಗೆ ಚರ್ಚಿಸಿದರು.