ಜಿಟಿಜಿಟಿ ಮಳೆಗೆ ಕುಸಿದು ಬಿದ್ದ ಗೋಡೆ

25-07-Shiva-1
ರಾಯಚೂರಿನ ಮಕ್ತಲ್‌ಪೇಟೆಯಲ್ಲಿನ ಶಾಂತಮ್ಮ ಎಂಬುವವರ ಮನೆ ಗೋಡೆ ನಿರಂತರ ಮಳೆಯಿಂದಾಗಿ ಸೋಮವಾರ ತಡ ರಾತ್ರಿ ಕುಸಿದು ಬಿದ್ದಿರುವುದು.
Published on

ರಾಯಚೂರು: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ನಗರದ ಮಕ್ತಲ್‌ಪೇಟೆಯಲ್ಲಿನ ಮನೆಯೊಂದರ ಗೋಡೆ ಸೋಮವರ ತಡರಾತ್ರಿ ಕುಸಿದು ಬಿದ್ದಿದೆ. ಮನೆಯಲ್ಲಿ ಮಲಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾಂತಮ್ಮ ಎಂಬುವವರ ಹಳೆ ಮನೆ ಗೋಡೆ ನಿರಂತರ ಮಳೆಗೆ ಶಿಥಿಲಗೊಂಡು ಕುಸಿದು ಬಿದ್ದಿದೆ. ಮನೆಯವರು ಮಲಗಿದ್ದ ಮಂಚದ ಪಕ್ಕದಲ್ಲಿ ಗೋಡೆ ಕುಸಿದು ಬಿದ್ದಿದ್ದು, ಮನೆಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರಂತರ ಮಳೆಗೆ ಮಣ್ಣಿನ ಹಾಗೂ ಹಳೆ ಮನೆಗಳಲ್ಲಿನ ಜನರಿಗೆ ಆತಂಕವುಂಟಾಗಿದ್ದು, ಮಳೆ ಮುಂದುವರಿದಲ್ಲಿ ಇನ್ನೂ ಹೆಚ್ಚಿನ ಮನೆಗಳಿಗೆ ಹಾನಿಯುಂಟಾಗುವ ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net