

ಕಲಬುರಗಿ: ಕೇಂದ್ರ ಸರ್ಕಾರದ ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗವೂ ದೇಶದ ವಿವಿಧೆಡೆ ಬೆಳೆಯುವ ತೊಗರಿಗೆ ಒಂದೇ ಬೆಂಬಲ ಬೆಲೆ ಘೋಷಿಸಿದ್ದು, ಜಿಐ ಟ್ಯಾಗ್ ಹೊಂದಿರುವ ಕಲಬುರಗಿ ಜಿಲ್ಲೆಯ ತೊಗರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಬೆಂಬಲ ಬೆಲೆಯಲ್ಲಿ ಪ್ರತ್ಯೇಕ ಕಾಲಂನಲ್ಲಿ ಜಿಐ ಟ್ಯಾಗ್‌ನ ತೊಗರಿಗೆ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಪ್ರದೇಶ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ ಆಗ್ರಹಿಸಿದರು.
ವಿಶೇಷ ಪೌಷ್ಠಿಕಾಂಶವುಳ್ಳ, ಶೇ.೨೨ ಔಷಧಿಯ ಗುಣವುಳ್ಳ ಜಿಲ್ಲೆಯ ತೊಗರಿಗೆ ಪ್ರತ್ಯೇಕ ದರ ನೀಡಬೇಕು. ಸಣ್ಣಕ್ಕಿ, ಅಕ್ಕಿ, ಜೋಳ, ಕಡಲೆ, ಮಾಲ್ದಂಡಿ ಜೋಳ ಎಂದು ಬಿಡಿ ಬಿಡಿಯಾಗಿ ಗುಣಮುಟ್ಟಕ್ಕೆ ಆಧಾರಿಸಿ ಬೆಲೆ ಹೆಚ್ಚು ಮಾಡಲಾಗಿದೆ. ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದಿಂದ ನೀಡಿರುವ ಜಿಐ ಟ್ಯಾಗ್ ಕ್ಲಾಸ್ ೩೧ ತೊಗರಿಗೆ ಬೇರೆ ತೊಗರಿಗಿಂತ ಕ್ವಿಂಟಾಲ್‌ಗೆ ಕನಿಷ್ಠ ೨೦-೨೫ ಪ್ರತಿಶತ ಹೆಚ್ಚು ಬೆಲೆ ಪ್ರತ್ಯೇಕವಾಗಿ ನಿರ್ಧಾರ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಕೃಷಿ ಉತ್ಪನ್ನ ಬೆಲೆ ನಿಗದಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿ ರೈತ ಮುಖಂಡರೊAದಿಗೆ ಬೆಳಗಾವಿಗೆ ಡಿ.೧೦ರಂದು ನಿಯೋಗ ತೆಗೆದುಕೊಂಡು ಹೋಗಿ, ಒತ್ತಾಯ ಮಾಡಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಚಂದ್ರಶೇಖರ ಹರಸೂರ, ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ್, ರಾಜೇಂದ್ರ ಕರೆಕಲ್, ಮಲ್ಲಿಕಾರ್ಜುನ ಪಾಟೀಲ್, ಗಿರೀಶಗೌಡ ಇನಾಂದಾರ ಇತರರಿದ್ದರು.
ಮಂಡಳಿ ಲೆಕ್ಕಕ್ಕೇ ಇಲ್ಲ
ತೊಗರಿ ಅಭಿವೃದ್ಧಿ ಮಂಡಳಿ ಇದೀಗ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಾಗಿದ್ದು, ತೊಗರಿಗೆ ಪೂರಕ ಕೆಲಸ ಆಗುತ್ತಿಲ್ಲ. ಜಿಐ ಟ್ಯಾಗ್ ತೊಗರಿಗೆ ಉತ್ತಮ ಬೆಲೆ ಕೊಡಿಸಲು ಬೀಮಾ ಪಲ್ಸ್ ಬ್ರಾÈಂಡ್ ಮಾಡಲಾಗಿತ್ತು. ಆದರೆ ದಾಲ್‌ಮಿಲ್‌ನಲ್ಲಿ ಬೇಳೆ ಖರೀದಿಸಿ ಜಿಐ ಟ್ಯಾಗ್ ಎಂದು ಮಾರಾಟ ಮಾಡಿದ್ದರು. ಜಿಲ್ಲೆಯಲ್ಲಿ ೧೪ ರೈತ ಉತ್ಪಾದಕ ಸಂಘಗಳು (ಎಫ್‌ಪಿಒ)ಗಳಿಗೆ ಅನುಮತಿ ನೀಡಿದ್ದು, ಅವುಗಳಿಂದ ಖರೀದಿಯೇ ಆಗಿಲ್ಲ. ಮಂಡಳಿ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಬಸವರಾಜ ಇಂಗೀನ್ ಬೇಸರ ವ್ಯಕ್ತಪಡಿಸಿದರು.